• first
  second
  third
  previous arrow
  next arrow
 • ಲಯನ್ಸ ಶಾಲೆಯಲ್ಲಿ ಸನ್ಮಾನ; ಸ್ವದೇಶಪ್ರೇಮ ನನ್ನ ಗರಿಮೆಯ ಮೂಲ, ದೇಶಸೇವೆಗಾಗಿ ತಾಯ್ನಾಡಿಗೆ ಮರಳಿದೆ; ಲೆಫ್ಟಿನೆಂಟ್ ಕೇವಲ್ ಹೆಗಡೆ

  300x250 AD

  ಶಿರಸಿ: ಲಯನ್ಸ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ ನಡೆಸಿಕೊಟ್ಟ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಭಾರತೀಯ ಸೇನೆಯ 15 ಗ್ರೆನೆಡರ್ಸ್ ಲೆಫ್ಟಿನೆಂಟ್ ಕೇವಲ್ ಹೆಗಡೆ ಮಾತನಾಡಿದರು. ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಗಳಲ್ಲಿ ಒಂದಾದ ಲೆಫ್ಟಿನೆಂಟ್ ಆಗಿ ಇತ್ತೀಚೆಗಷ್ಟೇ ಆಯ್ಕೆಗೊಂಡ ಲಯನ್ಸ್ ಶಾಲೆಯ ಹಿರಿಯ ವಿದ್ಯಾರ್ಥಿ ಕೇವಲ್ ತಮ್ಮ ಜೊತೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು ಮುಂದಾದ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ಹೊರದೇಶಕ್ಕಿಂತಲೂ ಸ್ವದೇಶದಲ್ಲಿ ಏನನ್ನಾದರೂ ಸಾಧನೆ ಗೈದು ದೇಶಕ್ಕೆ ಕೊಡುಗೆ ಕೊಡಬೇಕೆಂಬ ತಮ್ಮ ಹಂಬಲ ತಾವು ಈ ಸ್ಥಾನಕ್ಕೆ ಬರಲು ಕಾರಣವಾಯಿತೆಂದು ಮಕ್ಕಳ ಮನಮುಟ್ಟುವಂತೆ ತಿಳಿಸಿದರು.


  ಸರಿ ಸುಮಾರು ಒಂದುವರೆ ಘಂಟೆಗಳ ಕಾಲ ಮಕ್ಕಳ ಜೊತೆಯಲ್ಲಿ ಮಾತುಕತೆ ನಡೆಸಿದ ಕೇವಲ್ ಅವರು ತಾವು ಬಾಲ್ಯದಲ್ಲಿ ತೀರಾ ಸಾಮಾನ್ಯ ವಿದ್ಯಾರ್ಥಿಯಾಗಿದ್ದು, ನಂತರದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿ, ಲಂಡನ್ ಕಾರ್ಡಿಫ್ ಯೂನಿವರ್ಸಿಟಿಯಲ್ಲಿ ಇಂಟನ್ರ್ಯಾಷನಲ್ ಬಿಸಿನೆಸ್ ಮೇಲೆ ಎಂ.ಎಸ್. ಮಾಡುವಾಗ ಯಾವ ರೀತಿ ಅಂತರಂಗದಲ್ಲಿ ಭಾರತೀಯತೆಯ ಜಾಗೃತಿ ಮೂಡಿ ತೆನ್ನುವುದನ್ನು ಬಲು ಮಾರ್ಮಿಕವಾಗಿ ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ವಿದೇಶದಲ್ಲಿದ್ದು ಬೇಕಾದಷ್ಟು ಗಳಿಕೆ ಮಾಡಿದರೂ ತನ್ನತನದ ಎನ್ನುವುದನ್ನು ಬದಿಗಿಟ್ಟು, ಆ ದೇಶದ ದ್ವಿತೀಯ ದರ್ಜೆಯ ಪ್ರಜೆಯ ಸ್ಥಾನ ಪಡೆದು ಒಟ್ಟಾರೆ ನಡೆಸುವ ಬಾಳ್ವೆಗಿಂತ ಇಡಿಯ ರಾಷ್ಟ್ರ ತನ್ನನ್ನು ಗುರುತಿಸುವ ರೀತಿಯಲ್ಲಿ ತಾನೇನಾದರೂ ಸಾಧನೆ ಮಾಡಬೇಕೆಂಬ ಹಂಬಲ ಭಾರತೀಯ ಸೇನಾ ನೇಮಕಾತಿಯ ಎಸ್.ಎಸ್.ಬಿ.ಪರೀಕ್ಷೆಗೆ ಕುಳಿತುಕೊಳ್ಳುವಲ್ಲಿ ಪ್ರೇರೇಪಣೆ ನೀಡಿತು. ಅಲ್ಲಿಂದ ಮುಂದೆ ಸಾಗಿ ಬಂದ ತಮ್ಮ ಛಲದ, ದೃಢ ಹೆಜ್ಜೆಯ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ಮೈಮರೆತು ಕೇಳುವಂತೆ ಬಣ್ಣಿಸಿದರು.


  ಸೇನೆಯಲ್ಲಿ ಸೇರಿದಾಗ ಅವರ ಮೂಲ ಪ್ರೇರಣೆ ಯಾರು ? ಎಂಬ ಪ್ರಶ್ನೆಗೆ ‘ನನಗೆ ನಾನೇ ಪ್ರೇರಣೆ’ ಎಂಬ ಮಾರ್ಮಿಕ ಉತ್ತರ ಕೊಟ್ಟರು. ಸೈನ್ಯದಲ್ಲಿ ತನ್ನನ್ನು ನಂಬಿ ಧೈರ್ಯದಿಂದ ಮುನ್ನಡೆಯುವ ತನ್ನ ಮುಂದಿನ ಸೈನಿಕರುಗಳಿಗೆ ತನ್ನ ದಿಟ್ಟತನದ ಗಟ್ಟಿತನದ ವ್ಯಕ್ತಿತ್ವ ಪ್ರೇರಣೆಯಾಗಬೇಕೆನ್ನುವ ತನ್ನ ಅಂತಃಸತ್ವವೇ ತನಗೆ ಪ್ರೇರಣೆ ಎಂದು ಮಕ್ಕಳಿಗೆ ವಿವರಿಸಿದರು.


  ಅಷ್ಟೊಂದು ಕಲಿತು.. ಬಹುದೊಡ್ಡ ಕಂಪನಿಯಲ್ಲಿ ಒಳ್ಳೆಯ ಗಳಿಕೆಯಲ್ಲಿ ಇರಬಹುದಾದ ಸಂದರ್ಭದಲ್ಲಿಯೂ ಸೇನೆಗೆ ಸೇರುವ ತಮ್ಮ ನಿರ್ಧಾರಕ್ಕೆ ಹೆತ್ತವರ ತಡೆ ಬಂದಿಲ್ಲವೇ? ಎಂಬ ಮಕ್ಕಳ ಪ್ರಶ್ನೆಗೆ. ಕೇವಲ್ ಅವರ ತಂದೆ ನಿವೃತ್ತ ಜೀವನ ನಡೆಸುತ್ತಿರುವಂತಹ ಡಾಕ್ಟರ್ ಜಿ.ವಿ. ಹೆಗಡೆಯವರು ಉತ್ತರಿಸುತ್ತ ಬದುಕಿನಲ್ಲಿ ಹೇಗೆ ಮುಂದುವರಿಯಬೇಕು, ಯಾವುದನ್ನು ಆಯ್ಕೆ ಮಾಡಬೇಕು ಎಂದು ನಿರ್ಧಾರಿಸುವುದು ಮಕ್ಕಳ ಆಯ್ಕೆಗೆ ಬಿಟ್ಟಿದ್ದು. ಮಗನ ಸ್ವತಂತ್ರ ನಿರ್ಧಾರವನ್ನು ತಾನು ಗೌರವಿಸಿದೆ ಎಂಬ ನೇರ ಉತ್ತರವನ್ನು ನೀಡಿದರು.

  300x250 AD

  ತಾಯಿ- ಎಂ.ಇ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಕೋಮಲಾ ಭಟ್ ಅವರು ಮಗನ ನಿರ್ಧಾರದಿಂದ ತಾವು ಕೊಂಚ ಭಾವುಕರಾಗಿದ್ದು ನಿಜ, ಆದರೆ ಕೋಟ್ಯಂತರ ಜನರ ನಡುವೆ ತನ್ನ ಹೆಜ್ಜೆಯ ಗುರುತು ಮೂಡಿಸಿ- ಸರ್ವರಿಗೂ ಮಾದರಿಯಾಗುವ ರೀತಿಯಲ್ಲಿ ಬಾಳುವ ಮಗನ ನಿರ್ಧಾರವನ್ನು ತಾನು ಗೌರವಿಸಿದೆ, ಹಾರೈಸಿದೆನೆಂದು ಗದ್ಗದಿತರಾಗಿ ನುಡಿದರು. ಲೆಫ್ಟಿನೆಂಟ್ ಕೇವಲ್ ಅವರು ಭಾರತೀಯ ಸೇನೆಯ ತರಬೇತಿ ಚಟುವಟಿಕೆಗಳ ಚಿತ್ರಣವನ್ನು ದೃಶ್ಯೀಕರಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.ಚೆನ್ನೈನಲ್ಲಿ ತಾವು ತರಬೇತಿ ಪಡೆಯುವಾಗ ತಾವು ಪಡೆದ ಅನುಭವಗಳನ್ನು, ರೋಚಕ ಕ್ಷಣಗಳನ್ನು ಸೆರೆ ಹಿಡಿದ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಮಕ್ಕಳ ಮನಗೆದ್ದರು.


  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ ಎನ್.ವಿ.ಜಿ ಭಟ್ ಅಧ್ಯಕ್ಷರು ಲಯನ್ಸ್ ಶಿಕ್ಷಣ ಸಂಸ್ಥೆ ಇವರು ಕೇವಲ ಹೆಗಡೆಯವರ ಅವರ ವ್ಯಕ್ತಿತ್ವ ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು, ಭವಿಷ್ಯ ಉಜ್ವಲವಾಗಲಿ, ಎಂದು ಶುಭಾಶಯಗಳನ್ನು ಕೋರಿದರು. ಮತ್ತೋರ್ವ ಅತಿಥಿ ಲಯನ್ಸ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪೆÇ್ರಫೆಸರ್ ರವಿ ನಾಯಕ್ ಅವರು ಮಾತನಾಡುತ್ತಾ ನಮ್ಮಲ್ಲಿ ಕಲಿತ ವಿದ್ಯಾರ್ಥಿ ಇಂದು ಇಂತಹ ಹಿರಿಮೆ-ಗರಿಮೆಯನ್ನು ಸಾಧಿಸಿ ಸಮಾಜಕ್ಕೆ ಮಾದರಿಯಾಗಿರುವುದು ಸ್ತುತ್ಯಾರ್ಹ, ಮುಂದಿನ ಎಳೆಯರಿಗೆ ಕೇವಲ ವ್ಯಕ್ತಿತ್ವ ಮಾದರಿಯಾಗಲಿ ಎಂದು ಹಾರೈಸಿ ಲೆಫ್ಟಿನೆಂಟ್ ಕೇವಲ ಹೆಗಡೆ ಅವನನ್ನು ಸಮಾಜಕ್ಕೊಂದು ದೊಡ್ಡ ಕೊಡುಗೆಯನ್ನಾಗಿ ನೀಡಿದ ತಂದೆತಾಯಿಗಳಾದ ಡಾ. ಕೋಮಲಾ ಭಟ್ ಹಾಗೂ ಡಾಕ್ಟರ್ ಜೀ. ವಿ. ಹೆಗಡೆ ದಂಪತಿಗಳನ್ನು ಅಭಿನಂದಿಸಿದರು.


  ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಮುಕ್ತ ನಾಯಕ್ ಕಾರ್ಯಕ್ರಮ ನಡೆಸಿಕೊಟ್ಟರು. ಚೈತ್ರ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಮ್ ಜೆ ಎಫ್ ಲಯನ್ ಪ್ರಭಾಕರ್ ಹೆಗಡೆ, ಶಿಕ್ಷಣ ಸಂಸ್ಥೆಯ ಸದಸ್ಯರಾದ ಲಯನ್ ಕೆ.ಬಿ.ಲೋಕೇಶ್ ಹೆಗಡೆ, ಲಯನ್ಸ್ ಕ್ಲಬ್ಬಿನ ಖಜಾಂಚಿ ಗಳಾದ ಲಯನ್ ಅನಿತಾ ಹೆಗಡೆ, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾದ ಲಯನ್ ವಿನಯ್ ಹೆಗಡೆ, ಎಂ ಜೆ ಎಫ್ ಲಯನ್ ಜ್ಯೋತಿ ಭಟ್, ಎಂ ಜೆ ಎಫ್.ಲಯನ್ ತ್ರಿವಿಕ್ರಮ್ ಪಟವರ್ಧನ್, ಲಯನ್ ಅಶೋಕ್ ಹೆಗಡೆ, ಲಯನ್ ಅಶ್ವತ್ಥ ಹೆಗಡೆ, ಶಾಲೆಯ ಶಿಕ್ಷಕ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top