ಸಿದ್ದಾಪುರ: ಹಣದ ಆಸೆಗಾಗಿ ಕೆಲಸ ಮಾಡದೆ, ಸ್ವಸ್ಥ-ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಜನರ ಸೇವೆ ಮಾಡುವುದು ನಿಜವಾದ ಸೇವೆ. ಇಂಥಹ ಕಾರ್ಯದ ಮೂಲಕ ಜನರ ಮನಸ್ಸಲ್ಲಿ ನೆಲೆ ನಿಂತವರು ಡಾ.ಗಣಪತಿ ಹೆಗಡೆ ಕಿಬ್ಬಳ್ಳಿಯವರು ಎಂದು ವಿ.ಚಂದ್ರಶೇಖರ ಭಟ್ಟ ಗಾಳಿಮನೆ ಹೇಳಿದರು.
ಸಿದ್ದಾಪುರ ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಆಡಳಿತ ಮಂಡಳಿ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಅನೇಕ ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಗಣಪತಿ ಹೆಗಡೆ ಕಿಬ್ಬಳ್ಳಿ ದಂಪತಿಯನ್ನು ಸನ್ಮಾನಿಸಿ ಅವರು ಸೋಮವಾರ ಮಾತನಾಡಿದರು.
ಸಿದ್ದಾಪುರದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆವಹಿಸಿದ್ದರು. ಸಿದ್ದಾಪುರದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ರೂಪಾ ಭಟ್ಟ ಇಂದಿನ ದಿನದಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಕುರಿತು ಮಾತನಾಡಿದರು.
ಸನ್ಮಾನಿತರಾದ ಡಾ.ಗಣಪತಿ ಹೆಗಡೆ ಕಿಬ್ಬಳ್ಳಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪ್ರಮುಖರಾದ ಜಿ.ಬಿ.ಭಟ್ಟ ನೆಲೆಮಾಂವ, ಶಂಕರ ನಾರಾಯಣ ಹೆಗಡೆ ಕಿಬ್ಬಳ್ಳಿ, ಡಾ.ಅನುಷಾ ಕುಳಿಮನೆ, ರವೂಫ್ ಸಾಬ್ ಹೇರೂರು ಮತ್ತಿತರರು ಡಾ.ಗಣಪತಿ ಹೆಗಡೆ ಅವರ ಸೇವೆ ಕುರಿತು ಮಾತನಾಡಿದರು.
ಕೆ.ಟಿ.ನಾಯ್ಕ ಸನ್ಮಾನ ಪತ್ರ ವಾಚಿಸಿದರು. ದೇವಾಲಯದ ಅಧ್ಯಕ್ಷ ನರಸಿಂಹ ಮೂರ್ತಿ ಸು.ಹೆಗಡೆ ತ್ಯಾರಗಲ್ ಸ್ವಾಗತಿಸಿದರು. ನರಹರಿ ಹೆಗಡೆ ಕುಳಿಮನೆ ವಂದಿಸಿದರು, ಕಲಾ ಹೆಗಡೆ ನಿರ್ವಹಿಸಿದರು.