• first
    second
    third
    previous arrow
    next arrow
  • ಪಂ. ಗಣಪತಿ ಭಟ್ಟರಿಗೆ 70ರ ಸಂಭ್ರಮ:ಡಿ.12ಕ್ಕೆ ಸನ್ಮಾನ

    300x250 AD

    ಶಿರಸಿ: ಜೆಲ್ಲೆಯ ಹೆಸರಾಂತ ಖ್ಯಾತ ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂ. ಗಣಪತಿ ಭಟ್ಟ ಹಾಸಣಗಿ ಅವರ 70ರ ಸಂಭ್ರಮದ ಅಂಗವಾಗಿ ಶಿಷ್ಯವೃಂದ , ಅಭಿಮಾನಿ ಬಳಗ ಮತ್ತು ಜೆ.ಬಿ ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಇವರ ಸಹಭಾಗಿತ್ವದಲ್ಲಿ ಡಿ.12 ರವಿವಾರ ಧಾರವಾಡದ ಡಾ.ಅಣ್ಣಾಜಿರಾವ ಸಿರೂರ ರಂಗಮಂದಿರ ಸೃಜನಾದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಾಸಣಗಿಯ ಕೃಷಿ ಕುಟುಂಬದಲ್ಲಿ ಜನಿಸಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಮೂಲಕ ದೇಶಾದ್ಯಂತ ಶಿಷ್ಯ ವೃಂದ ಮತ್ತು ಅಭಿಮಾನಿಗಳನ್ನು ಗಳಿಸಿ ವಿಖ್ಯಾತರಾಗಿರುವ ಪಂ.ಗಣಪತಿ ಭಟ್ಟ ಹಾಸಣಗಿ ಅವರಿಗೆ ನೀಡಲಾಗುವ ಸನ್ಮಾನ ಸಮಾರಂಭದ ಉದ್ಘಾಟನೆ ಬೆಳಿಗ್ಗೆ 9.45 ಕ್ಕೆ ನೆರವೇರಲಿದ್ದು, ಖ್ಯಾತ ಹಿಂದೂಸ್ಥಾನಿ ಗಾಯಕ ಪಂ.ವಿನಾಯಕ ತೊರವಿ ಮುಖ್ಯ ಅತಿಥಿಗಳಾಗಿ ಹಾಗೂ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

    ಉದ್ಘಾಟನಾ ನಂತರ ರಾಧಿಕಾ ಸುದರ್ಶನ, ಚಿನ್ಮಯ ದೇಸಾಯಿ, ಜೀವನ ಪಾಟೀಲ, ಮೇಧಾ ಭಟ್ಟ, ವಿನಾಯಕ ಹೆಗಡೆ, ಪಂ. ಶ್ರೀಪಾದ ಹೆಗಡೆ, ಕಂಪ್ಲಿ ಇವರುಗಳಿಂದ ಗಾಯನ ಕಾರ್ಯಕ್ರಮ ಜರುಗಲಿದ್ದು, ತಬಲಾದಲ್ಲಿ ಶ್ರೀಧರ ಮಾಂಡ್ರೆ, ಶ್ರೀಹರಿ ದಿಗ್ಗಾವಿ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರು, ಸಾರಂಗ ಕುಲಕರ್ಣಿ, ಗುರುಪ್ರಸಾದ ಹೆಗಡೆ ಸಾಥ್ ನೀಡಲಿದ್ದಾರೆ.

    300x250 AD

    ಸಂಜೆ 6.30ಕ್ಕೆ ಪಂ.ಗಣಪತಿ ಭಟ್ಟ ಹಾಸಣಗಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಆ ನಂತರ ಹಾಸಣಗಿಯವರಿಂದ ಗಾಯನವಿದ್ದು, ಪಂ.ರಘುನಾಥ ನಾಕೋಡ ತಬಲಾದಲ್ಲಿ, ಸತೀಶ ಭಟ್ಟ ಹೆಗ್ಗಾರು ಸಂವಾದಿನಿಯಲ್ಲಿ ಜೊತೆಯಾಗಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Back to top