ಕುಮಟಾ: ನನಗೆ ಮಾತನಾಡಲು ಬರುವುದಿಲ್ಲ. ಗಿಡ ನೆಡಲು ಮಾತ್ರ ಗೊತ್ತು. ಎಲ್ಲರೂ ಗಿಡ ನೆಡಿ’ ಎಂದು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಹೇಳಿದರು.
ಅವರು ಕುಮಟಾದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿರುವ ಸೈನ್ಯವನಕ್ಕೆ ಅಡಿಪಾಯ ಕಾರ್ಯಕ್ರಮವೊಂದರಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಭಾಗವಹಿಸಿದ್ದ ನಿವೃತ್ತ ಸೈನಿಕರುಗಳು ಸೈನಿಕರ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಈ ವನದ ಕುರಿತಂತೆ ಹೆಮ್ಮೆ ವ್ಯಕ್ತಪಡಿಸಿ ಯುವಾಬ್ರಿಗೇಡ್ ಕಾರ್ಯಕರ್ತರನ್ನು ಅಭಿನಂದಿಸಿದರು.
ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲೂ ಒಂದು ಸೈನ್ಯವನದ ನಿರ್ಮಾಣವಾದಂತಾಗಿದೆ. ಕಾರ್ಗಿಲ್ ಯುದ್ಧಕ್ಕೆ 25 ತುಂಬುವ ವೇಳೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೈನ್ಯವನ ನಿರ್ಮಾಣದ ನಮ್ಮ ಕಲ್ಪನೆ ಸಾರ್ಥಕವಾಗಬಹುದು ಎಂಬುದು ಯುವಾ ಬ್ರಿಗೇಡ್ ಮಾರ್ಗದರ್ಶಿ, ಖ್ಯಾತ ವಾಗ್ಮೀ ಚಕ್ರವರ್ತಿ ಸೂಲಿಬೆಲೆ ಅನಿಸಿಕೆಯಾಗಿದೆ. ನಿವೃತ್ತ ಸೈನಿಕರು, ಬಾಳಿಗಾ ಕಾಲೇಜಿನ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.