ಹಳಿಯಾಳ: ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಿಗಾಗಿ ಆಪ್ತ ಸಲಹೆ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹುಬ್ಬಳ್ಳಿ ಮೂಲದಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತು ವಾಗ್ಮಿ ಪ್ರವೀಣಗುಡಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆಪ್ತ ಸಲಹೆ ಮತ್ತು ಮಾರ್ಗದರ್ಶನದ ಕುರಿತು ಸಮಗ್ರ ಮಾಹಿತಿ ನೀಡಿದರು. ಆಪ್ತ ಸಲಹೆಯ ವಿವಿಧ ಅಂಶಗಳಾದ ತರಬೇತಿ, ಪ್ರೇರೆಪಣೆ, ಸಲಹೆ, ಯಶಸ್ಸು, ಜೀವನಪಥ ಮತ್ತು ಗುರಿಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ವಿ ಎ ಕುಲಕರ್ಣಿ ಮಾತನಾಡುತ್ತ ಮಹಾವಿದ್ಯಾಲಯವು ಸಿಬ್ಬಂದಿಗಳ ಜ್ಞಾನ ವಿಕಾಸಕ್ಕಾಗಿ ಕಾಲ ಕಾಲಕ್ಕೆ ಅಗತ್ಯವಿರುವ ತರಬೇತಿಗಳನ್ನು ಆಯೋಜಿಸುತ್ತದೆ ಎಂದು ನುಡಿದರು.
40 ಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಸಮೀರ್ ಗಲಗಲಿ ನಿರೂಪಿಸಿದರು. ಡಾ. ಆರ್‍ಎಸ್ ಮುನ್ನೊಳ್ಳಿ ಮತ್ತು ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.