ಹೊನ್ನಾವರ: ಮಾವಿನಕುರ್ವಾದ ಜನವಿರಳ ಪ್ರದೇಶದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿದೆ ಎಂಬ ಆರೋಪವಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಾವಿನಕುರ್ವಾದಲ್ಲಿ ಕಾಮಗಾರಿಯೊಂದಕ್ಕೆ ಅಂದಾಜು ಲೊಡ್‍ಗಟ್ಟಲೆ ಮರಳು ಸಂಗ್ರಹಿಸಿಟ್ಟಿದ್ದು, ಈ ಬಗ್ಗೆ ಮೂರ್ರ್ನಾಲ್ಕು ದಿನಗಳ ಹಿಂದೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭಿಸಿದೆ.
ಈಗಾಗಲೇ ಎರಡು ತಿಂಗಳ ಅವಧಿಯೊಳಗೆ ನೂರಾರುಟನ್‍ಗಟ್ಟಲೆ ಮರಳು ಕಾಮಗಾರಿಗಾಗಿ ಮಾವಿನಕುರ್ವಾದಜನಸಂಚಾರ ವಿರಳವಿರುವ ಸ್ಥಳವೊಂದರಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎನ್ನಲಾಗಿದೆ. ಮಾವಿನಕುರ್ವಾ ಸೇತುವೆಕಾಮಗಾರಿಗಾಗಿ ಈ ಮರಳು ಸಂಗ್ರಹಿಸಿಟ್ಟಿದ್ದಾರೆ ಎನ್ನುವುದು ಸಾರ್ವಜನಿಕರುಆರೋಪವಾಗಿದೆ.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನಇಲಾಖೆಯಉಪನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು ನಾವು ಈಗಾಗಲೇ ಮಾವಿನಕುರ್ವಾದಲ್ಲಿ ಮರಳು ಸಂಗ್ರಹಿಸಿರುವ ಸ್ಥಳ ಪರಿಶೀಲನೆ ಮಾಡಿದ್ದೇವೆ. ಸಂಬಂಧಪಟ್ಟಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ಅಧಿಕೃತ ಮರಳಾಗಿದ್ದರೆ ದಾಖಲೆ ನೀಡುವಂತೆ ಸೂಚಿಸಲಾಗಿದೆ. ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು:
ಅಧಿಕೃತ ಮರಳುಗಾರಿಕೆ ಸ್ಥಗಿತವಾದಾಗಿದ್ದರಿಂದಅಕ್ರಮ ಮರಳುಗಾರಿಕೆ ಹೆಚ್ಚುತ್ತಿದೆ. ಇಲಾಖೆಗಳು ಜಾಣಕುರುಡುತನ ಪ್ರದರ್ಶಿಸುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಎಗ್ಗಿಲ್ಲದೇ ನಡೆಯುತ್ತಿರುವಅಕ್ರಮ ಮರಳುಗಾರಿಕೆ ಶೀಘ್ರವಾಗಿ ಕಡಿವಾಣ ಹಾಕಿ ಅಧಿಕೃತ ಮರಳುಗಾರಿಕೆ ಅನುಮತಿ ನೀಡಬೇಕೆಂದಿದ್ದಾರೆ. ದಾಖಲೆಯಿಲ್ಲದೇ ಸಂಗ್ರಹಿಸಿಟ್ಟ ಮರಳು ದಾಳಿ ವೇಳೆ ಪತ್ತೆಯಾದರೂಕ್ರಮಕ್ಕೆ ವಿಳಂಬವೇಕೆ.ದಂದೆ ನಡೆಸುವವರಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುವಉದ್ದೇಶವೆಎಂದುಸಾರ್ವಜನಿಕರುಪ್ರಶ್ನಿಸಿದ್ದಾರೆ.