• Slide
    Slide
    Slide
    previous arrow
    next arrow
  • ಅಕ್ಷಯ ಸೊಸೈಟಿಗೆ 1.03 ಕೋಟಿರೂ. ಲಾಭ

    300x250 AD

    ಕಾರವಾರ: ಜಿಲ್ಲಾರಂಗ ಮಂದಿರದಲ್ಲಿ ಅಕ್ಷಯ ಕೋ-ಆಪ್‍ಕ್ರೆಡಿಟ್ ಸೊಸೈಟಿ ಲಿ,. ಕಾರವಾರ ಇದರ 29 ನೇ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು.


    ಧರ್ಮಗುರು ಫಾ.ಸಂತೋಷ ಉರ್ಬನ ಫರ್ನಾಂಡಿಸರವರು ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಿದರು.ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದಅಧ್ಯಕ್ಷ ಲುಕಾಸ್‍ಆರ್ ಫರ್ನಾಂಡೀಸ್, ಸಂಘವು ಆರ್ಥಿಕ ಹಿಂಜರಿತದ ನಡುವೆಯೂ 2020-21 ನೇ ಸಾಲಿನಲ್ಲಿರೂ 1.03 ಕೋಟಿ ಲಾಭಗಳಿಸಿದ ಕುರಿತು ಮಾತನಾಡಿ,ಎಲ್ಲಾ ಸಾಧನೆಗಳಿಗೆ ಆಡಳಿತ ಮಂಡಳಿಯ ಸಮಯೋಚಿತ ನಿರ್ಧಾರಗಳು, ಸಿಬ್ಬಂದಿಗಳ ಪರಿಶ್ರಮ, ಶೇರುದಾರರ, ಗ್ರಾಹಕರ ಸಹಕಾರ,ಇಲಾಖೆಯ ಸೂಕ್ತ ಮಾರ್ಗದರ್ಶನವೇ ಕಾರಣವಾಗಿದೆ.

    300x250 AD

    ಸೊಸೈಟಿಯು ವರ್ಷಾಂತ್ಯಕ್ಕೆಒಟ್ಟೂರೂ. 159.31 ಕೋಟಿಠೇವಣಿ ಹೊಂದಿದ್ದು, ಶೇರು ಬಂಡವಾಳ ಮತ್ತು ಸ್ವಂತ ನಿಧಿಗಳು ರೂ 13.87 ಕೋಟಿ, ಗುಂತಾವಣೆಗಳು ರೂ 70.00 ಕೋಟಿಗಳಾಗಿದ್ದು, ದುಡಿಯುವ ಬಂಡವಾಳ ರೂ 172.96 ಕೋಟಿಗಳಿಗೆ ಏರಿಕೆಯಾಗಿದೆಎಂದು ತಿಳಿಸಿದರು. ಸೊಸೈಟಿಯು ಕಳೆದ ವರ್ಷಾಂತ್ಯಕ್ಕೆರೂ 638.51 ಕೋಟಿಯಷ್ಟು ಅಂತೂ ವ್ಯವಹಾರ ನಡೆಸಿ,ಅತ್ಯುನ್ನತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಇನ್ನು ಮುಂದೆಯೂ ಸಹ ಸೊಸೈಟಿಯ ಪ್ರಗತಿಗೆ ತಮ್ಮೆಲ್ಲರ ಸಹಾಯ ಸಹಕಾರ ಅತ್ಯಗತ್ಯ ಎಂದು ವಾರ್ಷಿಕ ಮಹಾಸಭೆಗೆ ತಿಳಿಸಿದರು.


    ಈ ಸಂದರ್ಭದಲ್ಲಿ 2020-21 ನೇ ಸಾಲಿನಲ್ಲಿ ಹೆಚ್ಚಿನ ಲಾಭಗಳಿಸಿದ ಕಾರವಾರ ಶಾಖೆಯ ಶಾಖಾ ವ್ಯವಸ್ಥಾಪಕ ಸಂತೋಷ ಫರ್ನಾಂಡಿಸ್‍ರವರಿಗೆ ಪ್ರಥಮ, ಹೊನ್ನಾವರ ಶಾಖೆಯ ಶಾಖಾ ವ್ಯವಸ್ಥಾಪಕ ಅನಿಲ್ ಬ್ರಿಟ್ಟೊರವರಿಗೆ ದ್ವಿತೀಯ ಹಾಗೂ ಶಿರಾಲಿ ಶಾಖೆಯ ಶಾಖಾ ವ್ಯವಸ್ಥಾಪಕಜೋಸಆಂತೊನ ಜಿ. ಪುರ್ಟಾಡೊರವರಿಗೆ ತೃತೀಯ ಬಹುಮಾನವನ್ನು ನೀಡಲಾಯಿತು.
    ಸಭೆಯಲ್ಲಿಎಲ್ಲಾ ನಿರ್ದೇಶಕರುಗಳು ಹಾಗೂ ಪ್ರಧಾನ ವ್ಯವಸ್ಥಾಪಕಆಂತೋನಿ ಪಿ. ಡಿಕೋಸ್ತಾ ಹಾಜರಿದ್ದರು. ನಿರ್ದೇಶಕರಾದಜೊಸೇಫಎಲ್. ನೊರೊನ್ಹಾ ಸ್ವಾಗತಿಸಿ, ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top