ಯಲ್ಲಾಪುರ: ಸಾಲ ಪಡೆದ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟಾಗ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡುವ ಜೀವನ ಮೌಲ್ಯ ನಿಧಿ ಆರಂಭಿಸಿ, ಅದನ್ನು ನೀಡುತ್ತಿರುವುದು ಮಾದರಿಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗ ಹೇಳಿದರು.
ಅವರು ಮಂಗಳವಾರ ಪಟ್ಟಣದ ಸೇಫ್ ಸ್ಟಾರ್ ಸೌಹರ್ದ ಸಹಕಾರಿಯ ಯಲ್ಲಾಪುರ ಶಾಖೆಯಲ್ಲಿ ಜೀವನ ಮೌಲ್ಯ ಪರಿಹಾರ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಾಲ ಪಡೆದ ಗ್ರಾಹಕರು ಸಕಾಲದಲ್ಲಿ ಮರುಪಾವತಿ ಮಾಡಿ,ಸಂಘದ ಶ್ರೇಯಸ್ಸಿಗೆ ಸಹಕರಿಸ ಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಖೆಯ ಅಧ್ಯಕ್ಷ ಜಿ.ಎಸ್.ಭಟ್ಟ ಕಾರೆಮನೆ ಮಾತನಾಡಿ, ಸಂಘ ಜಿಲ್ಲೆಯಲ್ಲಿ 12 ಶಾಖೆ ಹೊಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಲ್ಲಾಪುರ ಶಾಖೆಯು ಲಾಭದಲ್ಲಿ ಮುನ್ನೆಡೆದಿದೆ. ಸಾಲ ಪಡೆದು ಸ್ವಾವಲಂಬಿಯಾಗಿ ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದರು.
ಡಾ ಗುರುರಾಜ ಚಿಂಚಕಂಡಿ, ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಸ್ಥಾನೀಯ ನಿರ್ದೆಶಕ ತುಳಸಿ ಪಾಲೇಕರ್, ಎನ್.ಎಂ.ಭಟ್ಟ ಉಪಸ್ಥಿತರಿದ್ದರು. ಜೀವನ ಮೌಲ್ಯ ಪರಿಹಾರ ಚೆಕ್ ನ್ನು ಇಮಾಮ್ ಸಾಬ್ ಯಳ್ಳೂರು ಅವರಿಗೆ ನೀಡಲಾಯಿತು. ರವೀಂದ್ರ ನಗರ ಹಾಗೂ ಮೈನಳ್ಳಿಯ ಶರಾವತಿ ಹಾಗೂ ಅನ್ನಪೂರ್ಣ ಸ್ವ-ಸಹಾಯ ಸಂಘದ ಸದಸ್ಯರಿಗೆ ಸಾಲದ ಚಕ್ ನೀಡಲಾಯಿತು.
ಪವಿತ್ರಾ ನಾಯ್ಕ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಸುಬ್ರಾಯ ಪೈ ಪ್ರಸ್ತಾಪಿಸಿದರು. ಮಂಜುನಾಥ ಹಿರೇಮಠ ನಿರೂಪಿಸಿದರು. ಪಾರ್ವತಿ ಪಟಗಾರ ವಂದಿಸಿದರು.