ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಪ್ರಮುಖ ಭಾಗವಾದ ಶ್ರೀ ಗಜಾನನ ಹೆಗಡೆ ಪ್ರಶಸ್ತಿಯನ್ನು ಹಿರಿಯ ಭಾಗವತರಾದ ಸುಬ್ರಾಯ ಭಾಗವತ ಕಪ್ಪೆಕೆರೆಯವರಿಗೆ ಪ್ರದಾನ ಮಾಡಲಾಯಿತು.
ಗುಣವಂತೆಯಲ್ಲಿ ನಡೆದ ನಾಟ್ಯೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮವನ್ನು ಸಭಾಧ್ಯಕ್ಷ ಎಂ.ಕೆ. ಭಾಸ್ಕರ ರಾವ್ ಮತ್ತು ಅಭ್ಯಾಗತರೆಲ್ಲರೂ ಸೇರಿ ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ನಾಟ್ಯೋತ್ಸವದ ಪ್ರಮುಖ ಭಾಗವಾದ ಶ್ರೀ ಗಜಾನನ ಹೆಗಡೆ ಪ್ರಶಸ್ತಿ ಪುರಸ್ಕøತರಾದ ಸುಬ್ರಾಯ ಭಾಗವತ, ಕಪ್ಪೆಕೆರೆಯವರನ್ನು ಡಾ. ಜಿ.ಕೆ. ಹೆಗಡೆ, ಹರಿಕೆರೆಯವರು ಅಭಿನಂದನಾ ನುಡಿಗೈದರು. ಕಪ್ಪೆಕೆರೆ ಭಾಗವತರ ಭಾಗವತ ಘರಾಣೆಯನ್ನು ಪ್ರಶಂಶಿಸುತ್ತಾ, ಅವರು ಮೇಳದಲ್ಲಿ ಮಾಡಿದ ವಿಶಿಷ್ಠ ಶೈಲಿಯನ್ನು ಕೊಂಡಾಡಿದರು. ಭಾಗವತಿಕೆಯಲ್ಲಿ ಪರಿಪೂರ್ಣತೆ ಇರುವ ಇವರು ಚಂಡೆ, ಮದ್ದಳೆ ವಾದನ ಮತ್ತು ನೃತ್ಯ ಶೈಲಿಯಲ್ಲೂ ಅವರ ಪಾಂಡಿತ್ಯವನ್ನು ಕೊಂಡಾಡಿದರು.
ಶ್ರೀ ಗಜಾನನ ಹೆಗಡೆ ಪ್ರಶಸ್ತಿಯನ್ನು ಸಂಭ್ರಮದ ವೇದಿಕೆಯಲ್ಲಿ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಭಾಗವತ, ಕಪ್ಪೆಕೆರೆಯವರು ಪರಂಪಾರಗತ ಭಜನೆ ಮಾಡುವುದರಿಂದ ಆರಂಭಗೊಂಡ ನನ್ನ ಕಲಾ ಸೇವೆ ಇಡಗುಂಜಿ ಮೇಳದ ಸಂಪರ್ಕದಿಂದ ಭಾಗವತಿಕೆಯನ್ನು ಬದ್ಧತೆಯಲ್ಲಿ ಸ್ವಿಕರಿಸಿ, ಶಿಸ್ತು ಬದ್ಧವಾಗಿ ಅಧ್ಯಯನ ಮಾಡಿ, ಸಮಾಜ ಗುರುತಿಸಿ, ಗಜಾನನ ಹೆಗಡೆ ವೇದಿಕೆಯಲ್ಲಿ ಅವರ ಹೆಸರಿನಲ್ಲಿ ಇರುವ ಪ್ರಶಸ್ತಿ ಸ್ವೀಕಸುವ ಭಾಗ್ಯ ಬಂದದ್ದು ನನ್ನ ಕಲಾ ಸೇವೆಯ ಪಥದ ಅನನ್ಯತೆಯ ಸಂಕೇತ ಎಂದು ಅಭಿಪ್ರಾಯಪಟ್ಟರು.
ಕಲಾವಿದರು ಸಮಾಜದ ಸ್ವತ್ತಾಗಿದ್ದರೂ, ಪ್ರೇಕ್ಷಕರ ಬದಲಾದ ಭಾವ ತರಂಗಗಳಿಗೆ ಸಮೀಕರಿಸುವ ಕಲಾಭಿನಯ ಪರಂಪರೆಗೆ ತೊಡಕಾಗಿ ಶಾಸ್ತ್ರೀಯತೆಗೆ ಭಂಗ ಬರುವ ಸಾಧ್ಯತೆ ಕಾಣುತ್ತಿದೆ ಎಂಬ ಎಚ್ಚರಿಕೆಯ ಅಭಿಪ್ರಾಯ ಪಟ್ಟರು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಸಾಹಿತಿಗಳಾದ ಎಲ್. ಆರ್. ಭಟ್, ಯಕ್ಷಗಾನ ಸಂಶೋಧಕರಾದ ಡಾ. ಪಾದೇಕಲ್ಲು ವಿಷ್ಣು ಭಟ್, ಸಾಹಿತಿಗಳಾದ ಸುಮುಖಾನಂದ ಜಳವಳ್ಳಿ, ಮದ್ದಲೆ ವಾದಕರಾದ ಮಂಜುನಾಥ ಭಂಡಾರಿಯವರಿಗೆ ನೀಡಿ ಗೌರವಿಸಲಾಯಿತು.
ಯಕ್ಷಗಾನದ ಸಂಭಾಷಣೆಯೂ ಸಾಹಿತ್ಯದ ಭಾಗ ಎಂದು ಸುಮುಖಾನಂದ ಜಳವಳ್ಳಿ ಅಭಿಪ್ರಾಯ ಪಟ್ಟರು. ಡಾ. ಪಾದೇಕಲ್ಲು ವಿಷ್ಣು ಭಟ್ ಅಭಿಪ್ರಾಯ ವ್ಯಕ್ತ ಪಡಿಸುತ್ತಾ ಯಕ್ಷಗಾನ ಎಂಬ ಕಲೆಯು ಹಲವು ಆಯಾಮಗಳಿಗೆ, ಸಂಶೋಧನೆಗೆ ಪೂರಕ ಎಂದರು. ಅಭ್ಯಾಗತರಿಗೆ ಉಪಸ್ಥಿತರಿದ್ದ ಡಾ.ವಿ.ಜಯರಾಜನ್ ರವರು ಇಡಗುಂಜಿ ಮೇಳ ಕಲೆಯ ಒಂದು ಘರಾಣೆ ಎಂದರು. ನಾರಾಯಣ ಯಾಜಿಯವರು ಮಾತನಾಡುತ್ತಾ ಇಡಗುಂಜಿ ಮೇಳದ ಕಲಾವಿದರಾದ ಶಿವರಾಮ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ, ಮಹಾಬಲ ಹೆಗಡೆ ಎಲ್ಲರೂ ಕಲಾರಂಗ ಭೂಮಿಯಲ್ಲಿ ತಮ್ಮದೇ ಅನನ್ಯತೆಯನ್ನು ಮೆರೆದು ವಿಶಿಷ್ಠತೆಯನ್ನು ಸಲ್ಲಿಸಿದವರೆಂದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜ್ಯೋತಿ ಹೆಗಡೆ ಶಿರಸಿ ಅವರು ರುದ್ರವೀಣೆ ಪ್ರಸ್ತುತ ಪಡಿಸಿದರು. ಗುರುಮೂರ್ತಿ ವೈದ್ಯ ಇವರು ಪಖವಾಜ್‍ದಲ್ಲಿ ಸಾಥ್ ನೀಡಿದರು. ಫೆÇೀಕ್ ಲ್ಯಾಂಡ್ ಕೇರಳ, ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡದವರಿಂದ ಒಟ್ಟನ್ ತುಳ್ಳಾಲ್ ಮತ್ತು ಶೀತಂಕನ್ ತುಳ್ಳಾಲ್ ನೃತ್ಯ ಮನೋಜ್ಞವಾಗಿ ಪ್ರದರ್ಶಿಸಲ್ಪಟ್ಟಿತು. ನೃತ್ಯ ನಿಕೇತನ, ಕೊಡವೂರು ತಂಡದವರಿಂದ ನಾರಸಿಂಹ ನೃತ್ಯ ರೂಪಕವು ಪ್ರದರ್ಶಿಸಲ್ಪಟ್ಟಿತು.