• first
  second
  third
  previous arrow
  next arrow
 • ವಿ.ಪ ಅಭ್ಯರ್ಥಿ ಉಳ್ವೇಕರ್ ಪರ ಮತಯಾಚಿಸಿದ ಮಾಜಿ ಶಾಸಕ ಗಂಗಾಧರ ಭಟ್ಟ

  300x250 AD


  ಕಾರವಾರ: ಮಾಜಿ ಶಾಸಕ ಗಂಗಾಧರ ಭಟ್ಟ ಅಂಕೋಲಾ ತಾಲೂಕಿನ ವಿವಿಧ ಭಾಗಗಳಿಗೆ ತೆರಳಿ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಪರವಾಗಿ ಮತಯಾಚಿಸಿದರು.

  ಮೊಗಟಾ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗಟಾ, ಬ್ರಹ್ಮೂರ, ಕಾರೇಬೈಲ್ ಹಾಗೆಯೇ ಹಿಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹಿಲ್ಲೂರ, ಕೊಂಡಳ್ಳಿ, ಗುಂಡಬಾಳ, ಹೊಳೆಮಕ್ಕಿ, ಪಡುಗೇರಿ, ಹೆಬ್ರಿಗದ್ದೆ ಮತ್ತು ಅಚವೆ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಚವೆ, ಮೋತಿಗುಡ್ಡ, ಆಸನರೆ, ಅಂಗಡಿಬೈಲ್, ಕೆಸವಳ್ಳಿ ಹಾಗೂ ಇನ್ನಿತರ ಭಾಗದ ಗ್ರಾಮ ಪಂಚಾಯತ ಸದಸ್ಯರನ್ನು ಭೇಟಿಯಾಗಿ ಮುಂದೆ ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರನ್ನು ಗೆಲ್ಲಿಸುವಂತೆ ವಿನಂತಿಸಿದರು.

  300x250 AD

  ಈ ಸಂದರ್ಭದಲ್ಲಿ ಆಯಾ ಗ್ರಾಮ ಪಂಚಾಯತ ಸದಸ್ಯರು ಮತ್ತು ಹಿರಿಯ ಬಿಜೆಪಿ ಮುಖಂಡ ಸತೀಶ ಅಮದಳ್ಳಿ ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

  Share This
  300x250 AD
  300x250 AD
  300x250 AD
  Back to top