• Slide
    Slide
    Slide
    previous arrow
    next arrow
  • ಸುವಿಚಾರ

    300x250 AD


    ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್
    ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ |

    ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ – ಹೀಗೆ ವಿದ್ಯೆಗಳಲ್ಲಿ ಅರವತ್ನಾಲ್ಕು ರೀತಿ ಇದೆಯಂತೆ. ಇವೆಲ್ಲಕ್ಕೂ ಮಿಗಿಲಾದ್ದು, ಲೋಕದ ಬದುಕಿಗಿಂತ ಭಿನ್ನವಾದ ಫಲವನ್ನು ಕೊಡುವಂಥದು ಆತ್ಮವಿದ್ಯೆ. ಅದು ಅತ್ಯುನ್ನತವಾದ, ಸತ್ಯವಾದ ಮತ್ತು ಆಪ್ಯವಾದ ವಿದ್ಯೆಯಾಗಿದೆ. ಆ ಕುರಿತಾಗಿ ಎಚ್ಚರವೇ ಇಲ್ಲದೆ ಮತ್ತದೆಷ್ಟು ವಿದ್ಯೆಗಳನ್ನು ತಿಳಿದುಕೊಂಡಿದ್ದರೇನು ಉಪಯೋಗ? ಅದೆಷ್ಟೇ ಬಂಗಾರದ ಆಭರಣಗಳನ್ನು ಹೇರಿಕೊಂಡಿದ್ದರೂ ಕಂಠಸೂತ್ರವನ್ನೇ ಧರಿಸದ ವಿವಾಹಿತ ಹೆಣ್ಣು ಹೇಗೋ ಹಾಗೆ ಆತ್ಮವಿದ್ಯೆಯ ಕುರಿತು ಆಸ್ಥೆಯಿಲ್ಲದೆ ಬೇರೆ ನೂರಾರು ವಿದ್ಯೆಗಳನ್ನು ತಿಳಿದೂ ಪ್ರಯೋಜನವಿಲ್ಲ.

    300x250 AD

    ಶ್ರೀ ನವೀನ ಗಂಗೋತ್ರಿ

    Share This
    300x250 AD
    300x250 AD
    300x250 AD
    Leaderboard Ad
    Back to top