• first
    second
    third
    previous arrow
    next arrow
  • ಡಿ.8, 9, 11ಕ್ಕೆ ಶಿರಸಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ

    300x250 AD


    ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಎಸಳೆ 220/11 ಕೆ..ವಿ ವಿದ್ಯುತ್ ಉಪಕೇಂದ್ರದಲ್ಲಿ ಹೊಸ 10 ಎಂ.ವಿ.ಎ ಪರಿವರ್ತಕ ಚಾಲನೆ ಸಂಬಂಧ ಹಾಗೂ ಪಿ.ಡಬ್ಲೂ.ಡಿ ಇಲಾಖೆಯಿಂದ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ, ಶಿರಸಿಯಿಂದ ಕುಮಟಾ ರಸ್ತೆ ಅಗಲೀಕರಣ, 110 ಕೆ.ವಿ ವಿದ್ಯುತ್ ಗೋಪುರ ಬದಲಾವಣೆ ಕಾಮಗಾರಿ ಹಾಗೂ 110/11 ಕೆ.ವಿ ಉಪಕೆಂದ್ರ ಶಿರಸಿಯಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.8 ಬುಧವಾರ ದಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆವರೆಗೆ 220 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೊಡ್ನಳ್ಳಿ, ಬಿಸಲಕೊಪ್ಪ, ಅಂಡಗಿ, ಭಾಷಿ ಹಾಗೂ ಪಟ್ಟಣ ಶಾಖಾ ವ್ಯಾಪ್ತಿಯ ವಿವೇಕಾನಂದ ನಗರ, ಕಸ್ತೂರಬಾನಗರ, ಕೆ.ಎಚ್.ಬಿ ಕಾಲೋನಿ, ಚಿಪಗಿ, ನಾರಾಯಣ ಗುರುನಗರ ಹಾಗೂ ಗೌಡಳ್ಳಿ ಪ್ರದೇಶಗಳಲ್ಲಿ ವದ್ಯುತ್ ವ್ಯತ್ಯವಾಗಲಿದೆ.


    ಡಿ.9 ಗುರುವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೇವನಳ್ಳಿ, ಸಂಪಖಂಡ, ಕೆಂಗ್ರೆ, ಹಾಗೂ ಮಾರಿಗದ್ದೆ ಪ್ರದೇಶಗಳಲ್ಲಿ, ಡಿ.11 ಶನಿವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆವರೆಗೆ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ದೇವನಳ್ಳಿ, ಸಂಪಖಂಡ, ಕೆಂಗ್ರೆ, ಹಾಗೂ ಮಾರಿಗದ್ದೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top