ಭಟ್ಕಳ: ಕಾರ್ಕಳ ಮೂಲದ ಇಬ್ಬರು ತಾಲೂಕಿನ ಗುಳ್ಳಿಯ ಮನೆಯೊಂದರ ದನಗಳನ್ನು ಕಳ್ಳತನ ಮಾಡಿ, ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಲೀಲ್ ಹುಸೇನ್ ಹಾಗೂ ಕಿನ್ನಿಗೋಳಿಯ ಮುಸ್ತಫಾ ಮೊಹಮ್ಮದ್ ಬಂಧಿತ ಆರೋಪಿಗಳು. ಪೊಲೀಸರು ದಾಳಿ ನಡೆಸಿದ ವೇಳೆ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ತಾಲೂಕಿನ ಗುಳ್ಳಿಯಲ್ಲಿನ ಮನೆಯೊಂದರಲ್ಲಿ ಆರೋಪಿಗಳು ವಾಸವಾಗಿದ್ದು ದನಗಳನ್ನು ಕಳ್ಳತನ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ ಮಾಂಸ ತೆಗೆದುಕೊಳ್ಳುತ್ತಿದ್ದ ಭಟ್ಕಳದ ಇಬ್ರಾಹಿಂ ಎನ್ನುವವನ ಮೇಲೂ ಕೇಸ್ ದಾಖಲಿಸಲಾಗಿದ್ದು, ಈತನ ಪತ್ತೆಗೆ ಕೂಡಾ ಪೊಲೀಸರು ಬಲೆ ಬೀಸಿದ್ದಾರೆ.