• first
    second
    third
    previous arrow
    next arrow
  • ವಿಜೃಂಭಣೆಯಿಂದ ನಡೆದ ಸಾಂಬಸದಾಶಿವ ದೇವರ ರಥೋತ್ಸವ

    300x250 AD

    ಸಿದ್ದಾಪುರ: ನೂರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ತಾಲೂಕಿನ ಗುಬ್ಬಗೊಡಿನ ಸಾಂಬಸದಾಶಿವ ದೇವರ ರಥೋತ್ಸವ ನಡೆಯಿತು.


    ದೇವಾಲಯದ ಆವರಣದಲ್ಲಿ ಸಾಂಬಸದಾಶಿವ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ರಥಕ್ಕೆ ಹಾಸನದ ಸದ್ಗುರು ಸಮರ್ಥ ರಾಮ ಅವಧೂತರು ಹಾಗೂ ಪುರೋಹಿತ ವರ್ಗ ವಿಶೇಷ ಪೂಜೆ ಸಲ್ಲಿಸಿತು. ಬಳಿಕ ಸಂಜೆ ವೇಳೆಗೆ ದೇವಾಲಯದ ಆವರಣದಲ್ಲಿ ವಿಜ್ರಂಭಣೆಯಿಂದ ರಥೋತ್ಸವ ನಡೆಯಿತು.

    300x250 AD


    ಭಕ್ತರ ಪಾಲಿನ ಶಕ್ತಿ ಕೇಂದ್ರವಾಗಿರುವ ಗುಬಗೋಡಿನ ಸಾಂಬಸದಾಶಿವ ದೇವರ ದೇವಾಲಯವನ್ನು ಕಳೆದ ವರ್ಷ ಮರು ನಿರ್ಮಾಣ ಮಾಡಲಾಗಿತ್ತು. ಆದರೆ ನೂರಾರು ವರ್ಷಗಳ ಹಿಂದೆ ನಡೆಯುತ್ತಿದ್ದ ರಥೋತ್ಸವ ನಿಂತಿರುವ ಬಗ್ಗೆ ಹಾಸನದ ಸದ್ಗುರು ಸಮರ್ಥ ರಾಮ ಅವಧೂತರ ತಿಳಿಸಿ ಪುನಃ ಪ್ರಾರಂಭಿಸುವ ಬಗ್ಗೆ ಆಜ್ಞಾಪಿಸಿದ್ದರು. ಅದರಂತೆ ನೂತನ ರಥದ ರಥೋತ್ಸವ ಗತವೈಭವ ಮರುಕಳಿಸುವಂತಾಯಿತು.

    Share This
    300x250 AD
    300x250 AD
    300x250 AD
    Back to top