• first
  second
  third
  previous arrow
  next arrow
 • ಅಂಕೋಲಾ ಅರ್ಬನ್ ಬ್ಯಾಂಕಿಗೆ ರೂ.54.91 ಲಕ್ಷ ನಿವ್ವಳ ಲಾಭ

  300x250 AD

  ಅಂಕೋಲಾ: ಅಂಕೋಲಾ ಅರ್ಬನ್ ಬ್ಯಾಂಕಿನ ಪ್ರಧಾನಕಛೇರಿಯಲ್ಲಿ ಭಾನುವಾರ 108 ನೇ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.


  2020-21ನೇ ಸಾಲಿನಲ್ಲಿ ಬ್ಯಾಂಕ್ 54.91 ಲಕ್ಷ ನಿವ್ವಳ ಲಾಭದಲ್ಲಿದ್ದು, ಶೇರುದಾರ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ಆಡಳತ ಮಂಡಳಿಯ ಶಿಫಾರಸ್ಸು ಮಾಡಿದೆ. ಜಿಲ್ಲಾ ಮಟ್ಟದಅತ್ಯುತ್ತಮ ಬ್ಯಾಂಕಎಂದು ಕೆ.ಡಿ.ಸಿ.ಸಿ.ಬ್ಯಾಂಕ್ 21.12.2020 ರಂದು ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಅಂಕೋಲಾ ಅರ್ಬನ್‍ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ್ ಸಭೆಯಲ್ಲಿ ಹೇಳಿದರು.


  ನಿವ್ವಳ ಲಾಭದಲ್ಲಿ ಕಾಯ್ದಿಟ್ಟ ನಿಧಿಗೆ ಶೇ.35 ರಂತೆ ರೂ.1921978, ಸಹಕಾರಿ ಶಿಕ್ಷಣ ನಿಧಿಗೆ ಶೇ.2 ರಂತೆ ರೂ.71388, ಶೇರು ಲಾಭಾಂಶ ಶೇ.10 ರಂತೆರೂ. 3324500 ಸೇರಿದಂತೆಇತರೇ ನಿಧಿಗಳಿಗೆ ವರ್ಗೀಕರಿಸಲಾಗಿದೆ. 2020-21ನೇ ಸಾಲಿನಲ್ಲಿಆಡಿಟ್ ವರ್ಗೀಕರಣದಲ್ಲಿ ಅ ವರ್ಗದಲ್ಲಿ ಮುಂದುವರೆದಿದೆ ಎಂದರು.

  300x250 AD


  ನಿರ್ದೇಶಕ ರಾಜೇಂದ್ರಎಸ್.ಶೆಟ್ಟಿ ಮಾತನಾಡಿದರು. ಶೇರುದಾರರಾದ ಉಮೇಶ ನಾಯ್ಕ, ಆರ್.ಟಿ. ಮಿರಾಶಿ, ಎಚ್.ಎನ್.ನಾಯಕ, ರಮಾನಂದ ನಾಯಕ, ಅರುಣ ನಾಡಕರ್ಣಿ ಮೊದಲಾದವರು ಸಭೆಯಲ್ಲಿ ಚರ್ಚಿಸಿದರು.


  ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಭೈರವ ನಾಯ್ಕ, ನಿರ್ದೇಶಕರಾದ ಗೋವಿಂದರಾಯ ನಾಯ್ಕ, ಕೃಷ್ಣಾನಂದ ಶೆಟ್ಟಿ, ಚಂದ್ರಕಾಂತ ನಾಯ್ಕ, ನಾಗಾನಂದ ಬಂಟ, ಪ್ರಕಾಶಕುಂಜಿ, ಪ್ರಭಾ ಹಬ್ಬು, ಅನುರಾಧ ನಾಯ್ಕ ಉಪಸ್ಥಿತರಿದ್ದರು.


  ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರವೀಂದ್ರವೈದ್ಯ ವರದಿ ವಾಚಿಸಿ, ನಿರ್ವಹಿಸಿದರು. ರಾಜೇಂದ್ರ ಶೆಟ್ಟಿ ವಂದಿಸಿದರು. ಸಹಾಯಕ ವ್ಯವಸ್ಥಾಪಕರಾದ ನಾಗರಾಜಎಸ್.ಶೆಟ್ಟಿ, ದೀಪಕ ಎಸ್.ತಾಳೇಬೈಲಕರ್ ನೌಕರರಾದ ಮಹಾಬಲೇಶ್ವರ ಬಂಡಿಕಟ್ಟೆ, ಜಯಂತ ಜಿ.ನಾಯ್ಕ ಇನ್ನಿತರರುಇದ್ದರು.

  Share This
  300x250 AD
  300x250 AD
  300x250 AD
  Back to top