• Slide
    Slide
    Slide
    previous arrow
    next arrow
  • ಅಪ್ಪು ಕನಸಿನ ‘ಗಂಧದ ಗುಡಿ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ

    300x250 AD

    ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ’ಗಂಧದ ಗುಡಿ’ ಚಿತ್ರದ ಟೈಟಲ್ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಪಿಆರ್‌ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಿದ್ದು, ಕರ್ನಾಕಟದ ವನ್ಯ ಶ್ರೀಮಂತಿಕೆಯನ್ನು ಸುಂದರವಾಗಿ ತೋರಿಸಲಾಗಿದೆ.


    ನವೆಂಬರ್ 1ರಂದು ಈ ಟೀಸರ್ ಬಿಡುಗಡೆ ಮಾಡಲು ಪುನೀತ್ ರಾಜ್ ಕುಮಾರ್ ಅವರು ನಿರ್ಧರಿಸಿದ್ದರು. ಆದರೆ ಅಪ್ಪು ಅವರ ಅಕಾಲಿಕ ನಿಧನದ ಕಾರಣದಿಂದ ಮುಂದೂಡಲಾಗಿತ್ತು. ಪಾರ್ವತಮ್ಮ ರಾಜ್ ಕುಮಾರ್ ಹುಟ್ಟಿದ ದಿನವಾದ ಇಂದು ಗಂಧದಗಡಿ ಟೀಸರ್’ನ್ನು ಬಿಡುಗಡೆ ಮಾಡಲಾಗಿದೆ.

    300x250 AD


    ಕರ್ನಾಟಕದ ವಿವಿಧ ಅರಣ್ಯ ಪ್ರದೇಶಗಳು, ಜಲಪಾತಗಳ ದೃಶ್ಯಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ವಿಶೇಷವಾಗಿ ಉತ್ತರ ಕನ್ನಡದ ಹಲವೆಡೆ ಇವದನ್ನು ಚಿತ್ರೀಕರಿಸಲಾಗಿತ್ತು. ಚಿತ್ರಕ್ಕೆ ಅದ್ಭುತ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರು ಹಿನ್ನೆಲೆ ಸಂಗೀತ ಬೆರಗು ಮೂಡಿಸುತ್ತಿದೆ. ’ಗಂಧದ ಗುಡಿ’ ಸಾಕ್ಷ್ಯಚಿತ್ರವು 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top