ಶಿರಸಿ: ಬನವಾಸಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬನವಾಸಿಯಲ್ಲಿ ಇಂದು ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ವಿಧಾನ ಪರಿಷತ್ ಸದಸ್ಯರಾದ ಬಿ. ಕೆ .ಹರಿಪ್ರಸಾದ್ ರವರು ವಿಧಾನ ಪರಿಷತ್ ಚುನಾವಣೆಯ ಭಾಗವಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ರವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು,
ಭೀಮಣ್ಣ ನಾಯ್ಕ ರವರು ಈ ಜಿಲ್ಲೆಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ, ಅವರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಕೊರೋನ ಅಂತ ಸಂದರ್ಭದಲ್ಲಿ ಅನೇಕ ಸಹಾಯ ಹಸ್ತ ಮಾಡಿದ್ದಾರೆ, ಬಿಜೆಪಿ ಸರ್ಕಾರ ಯಾವುದೇ ಹುದ್ದೆಯನ್ನು ಸೃಷ್ಠಿಮಾಡದೆ ನಿರುದ್ಯೋಗ ಸೃಷ್ಠಿಸಿರುವುದು ನಮ್ಮ ದುರಂತ, ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದ ಸಂದರ್ಭದಲ್ಲಿ ಮಾಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಕಾನೂನು ಮಾಡಿ ಎಲ್ಲರಿಗೂ ಉದ್ಯೋಗ ನೀಡುತ್ತಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು. ಭೀಮಣ್ಣ ನಾಯ್ಕ ರವರ ಗೆಲುವು ನಮ್ಮ ನಿಮ್ಮೆಲ್ಲರ ಗೆಲುವು ಅವರಿಗೆ ಪ್ರಥಮ ಪ್ರಾಶಸ್ತ್ಯ ಮತವನ್ನು ನೀಡಿ ಬಹುಮತದಿಂದ ಗೆಲ್ಲಿಸಿ ಆಯ್ಕೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಕೆ ಭಾಗ್ವತ್, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ದೊಡ್ಮನಿ, ಕಾಂಗ್ರೆಸ್ ಮುಖಂಡ ಅಬ್ಬಾಸ್ ತೊನ್ಸೆ, ವೀಕ್ಷಕರಾದ ಜ್ಯೋತಿ ಪಾಟಿಲ್, ಮಹಿಳಾ ಅಧ್ಯಕ್ಷರಾದ ಶ್ರೀಲತಾ ಕಾಳೇರಮನಿ, ಅಲ್ಪಸಂಖ್ಯಾತರ ಅಧ್ಯಕ್ಷ ಮಹ್ಮದ್ ಕರಿಂ, ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯ್ಕ, ಮುಖಂಡರಾದ ಕಿರಣ್ ನಾಯ್ಕ, ಶಿವಾಜಿ ಬನವಾಸಿ, ಮುದ್ದಪ್ಪ ನಾಯ್ಕ, ಆಶಿಫ್ ಚೌದರಿ, ಅಲ್ಪಾಪ್, ಇಮ್ರಾನ್ ಜವಳಿ, ಗಣಪತಿ ನಾಯ್ಕ, ಹಾಗೂ ಬನವಾಸಿ ಪಂಚಾಯತ್ ಸದಸ್ಯರು, ಅಂಡಗಿ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.