• Slide
  Slide
  Slide
  previous arrow
  next arrow
 • ಇನ್ನೊಂದು ವಾರದಲ್ಲಿ ಬೆಳೆ ಹಾನಿ ಸರ್ವೆ ಕಾರ್ಯ ಸಂಪೂರ್ಣ; ಸಚಿವ ಹೆಬ್ಬಾರ್

  300x250 AD


  ಸಿದ್ದಾಪುರ: ಜಿಲ್ಲೆಯ ಆರು ತಾಲೂಕುಗಳಲ್ಲಿ ಮಳೆ ಹಾನಿಯ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಇನ್ನೊಂದು ವಾರದಲ್ಲಿ ಉಳಿದ ಎಲ್ಲ ತಾಲೂಕುಗಳಲ್ಲಿ ಸರ್ವೆ ಮುಗಿಯಲಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ನಂತರದ 48 ಗಂಟೆಗಳಲ್ಲಿ ಕಾನೂನು ಬದ್ಧವಾಗಿ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.


  ಪಟ್ಟಣದ ಬಾಲಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಡಗೋಡ, ಹಳಿಯಾಳ ಭಾಗಗಳಲ್ಲಿ ಭತ್ತ ಹಾಗೂ ಜೋಳ ಹಾನಿ ಆಗಿದೆ. ಘಟ್ಟದ ಕೆಳಗಿನ ಭಾಗದಲ್ಲಿ ಶೇಂಗಾ, ಹಣ್ಣು ಹಂಪಲು ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. ಅನೇಕರು ವಿಮಾ ರಕ್ಷಣೆ ಹೊಂದಿದ್ದಾರೆ. ವಿಮಾ ಕಂಪನಿಯವರು ಜವಾಬ್ದಾರಿ ಮರೆತು ಪರಿಹಾರ ನೀಡಲು ಕ್ಯಾತೆ ತೆಗೆದರೆ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸುವಂತೆ ನಾವೇ ತಿಳಿಸಿದ್ದೇವೆ. ರೈತರ ಬೆಳೆ ಹಾನಿಗೆ ನಾವು ನೀಡುತ್ತಿರುವ ಪರಿಹಾರ ಶೇ.10ರಷ್ಟು ಆಗುವುದಿಲ್ಲ ಎನ್ನುವ ಅರಿವು ನನಗಿದೆ.


  ಇಂದು ಜಿಲ್ಲೆಯಲಿ ಕೊರೊನಾ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕಾಗಿರುವುದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗಿತ್ತು. ಇದೀಗ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಪುನ: ಹೊಸ ಆತಂಕ ಪ್ರಾರಂಭವಾಗಿದೆ. ಈ ರೋಗದ ಕಾರಣದಿಂದಾಗಿ ಸರ್ಕಾರ ಅಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಕೈಗಾರಿಕೋದ್ಯಮಿಯವರೆಗೂ ಹತಾಶೆ ಮೂಡುವಂತಾಗಿದೆ. ಶಾಲೆ ಹಾಗೂ ಅಂಗನವಾಡಿಗಳಿಗೆ ಕಳಪೆ ಆಹಾರ ನೀಡಿದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಮಕ್ಕಳಿಗೆ ನೀಡುವ ಆಹಾರದ ವಿಚಾರದಲ್ಲಿ ಅಸಡ್ಡೆ ಸಲ್ಲ ಎಂದು ಶಿವರಾಮ ಹೆಬ್ಬಾರ ಹೇಳಿದರು.

  300x250 AD


  ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ಗುರುರಾಜ ಶಾನಭಾಗ, ಗುರುಪ್ರಸಾದ ಹೆಗಡೆ, ನಾಗರಾಜ ನಾಯ್ಕ, ಚಂದ್ರಕಲಾ ನಾಯ್ಕ, ಪ್ರಸನ್ನ ಹೆಗಡೆ, ಕೃಷ್ಣಮೂರ್ತಿ ಕಡಕೇರಿ, ಎಸ್.ಕೆ.ಮೇಸ್ತ ಇತರರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top