ಕಾರವಾರ: ಶಾಂತಿಯುತ, ನ್ಯಾಯಸಮ್ಮತ ಮತದಾನಕ್ಕೆ ಎಲ್ಲ ರಾಜಕೀಯ ಪಕ್ಷ ಮತ್ತು ಪಕ್ಷೇತರರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ಮುಲೈ ಮುಗಿಲನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ, ಉತ್ತರಕನ್ನಡ ಸ್ಥಳೀಯ ಸಂಸ್ಥೆಯ ಮತಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಹಾಗೂ ಅಭ್ಯರ್ಥಿಯಏಜೇಂಟರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮತದಾನ ದಿನದ 48 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರ ಕೈಗೊಳ್ಳಲು ಅವಕಾಶವಿರುತ್ತದೆ.ತದನಂತರ ಬಹಿರಂಗ ಪ್ರಚಾರಕ್ಕೆಅವಕಾಶವಿರುವುದಿಲ್ಲ. ಈ ಸಮಯದಲ್ಲಿಜಾಹೀರಾತು ಪ್ರಕಟಿಸದಲ್ಲಿಅನುಮತಿಯೊಂದಿಗೆ ಪ್ರಕಟಿಸಿ, ಪ್ರಸ್ತುತಚುನಾವಣೆಯಲ್ಲಿ ವೆಚ್ಚದ ಮಿತಿಇಲ್ಲದಿದ್ದರೂ ಕೂಡ ಅಭ್ಯರ್ಥಿಗಳು ತಾವು ಮುದ್ರಿಸುವಕರಪತ್ರ ಮತ್ತು ಬ್ಯಾನರ್‍ಗಳ ವಿವರಗಳನ್ನು ಮುದ್ರಿಸಿದ ಪ್ರತಿಗಳ ಸಂಖ್ಯೆ ಹಾಗೂ ಮುದ್ರಕರ ಹೆಸರಿನ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಸ್ಪರ್ಧಿಸಿದ ಅಭ್ಯರ್ಥಿಗಳು ಚುನಾವಣಾ ಮಾದರಿ ನೀತಿ ಸಂಹಿತೆಯನ್ನುಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಚುನಾವಣಾಆಯೋಗದಿಂದ ನೀಡಲಾಗುವ ನೇರಳೆ ಬಣ್ಣದ ಸ್ಕೇಚ್ ಪೇನ್‍ನಿಂದ ಮಾತ್ರ ಮತದಾನ ಮಾಡಬೇಕು. ಮತದಾನ ಸಮಯ ಮುಂಜಾನೆ 8 ರಿಂದ ಸಾಯಂಕಾಲ 4 ಗಂಟೆಯವರೆಗೆಇದ್ದು, ಪ್ರಾಶಸ್ತ್ಯದ ಮತವನ್ನು ಅಂಕಿಗಳ ಮೂಲಕ ಅಂದರೆ 1, 2, 3 ಇತ್ಯಾದಿ ಕ್ರಮದಲ್ಲಿಗುರುತು ಹಾಕಬೇಕು. ಅಕ್ಷರದರೂಪದಲ್ಲಿ (ಒಂದು, ಎರಡು, ಮೂರುಇತ್ಯಾದಿ)ಪ್ರಾಶಸ್ತ್ಯದ ಮತವನ್ನು ಬರೆಯಬಾರದುಎಂದರು.
ಜಿಲ್ಲೆಯಾದ್ಯಂತ 238 ಮತಗಟ್ಟೆಗಳಿದ್ದು, ಸ್ಪರ್ಧಿಸಿದ ಅಭ್ಯರ್ಥಿಗಳು ಪ್ರತಿ ಮತಗಟ್ಟೆಗೆ ಪೋಲಿಂಗ್‍ಏಜೆಂಟ್ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ. ಅಭ್ಯರ್ಥಿಗಳು ಏಜೆಂಟ್‍ರ ನೇಮಕಾತಿ ನಮೂನೆಗಳನ್ನು ಚುನಾವಣಾ ಶಾಖೆಯಿಂದಪಡೆದುಕೊಳ್ಳಬೇಕು. ಡಿ-ಮಸ್ಟರಿಂಗ್‍ಕಾರ್ಯ ಮುಕ್ತಾಯಗೊಂಡ ನಂತರಜಿಲ್ಲೆಯಎಲ್ಲ 238 ಮತ ಕೇಂದ್ರಗಳ ಮತದಾನ ಮಾಡಿದ ಮೊಹರಾದ ಮತಪೆಟ್ಟಿಗೆಗಳನ್ನು ಹಾಗೂ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಲಕೋಟೆಗಳನ್ನು ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾರವಾರದಲ್ಲಿ ನಿರ್ಮಿಸಲಾದ ಭದ್ರತಾ ಕೊಠಡಿಯಲ್ಲಿಟ್ಟು ಸೀಲ್ ಮಾಡಲಾಗುವದು. ಈ ಸಮಯದಲ್ಲಿ ಅಭ್ಯರ್ಥಿಗಳು ಅಥವಾಏಜೆಂಟರು ಹಾಜರಿರಬೇಕು. ಮತಏಣಿಕೆಕೇಂದ್ರದಲ್ಲಿ ಮೊಬೈಲ್ ನಿಷೇಧಿಸಲಾಗಿರುತ್ತದೆ.
ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಏಣಿಕೆಏಜೆಂಟರುಏಣಿಕೆಕೇಂದ್ರದಲ್ಲಿ ಸಮಾಧಾನ ಹಾಗೂ ಸೌಜನ್ಯದಿಂದ ವರ್ತಿಸಿ ಮತಏಣಿಕೆಕಾರ್ಯದಲ್ಲಿ ಸಹಕರಿಸುವದರೊಂದಿಗೆ ಚುನಾವಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಅಪರಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ, ನೋಡಲ್ ಅಧಿಕಾರಿಆರ್.ವಿ.ಕಟ್ಟಿ, ಚುನಾವಣಾ ಶಿರಸ್ತೇದಾರ ಎಮ್.ಎ.ಶೇಖ್ ಉಪಸ್ಥಿತರಿದ್ದರು.