ಅಂಕೋಲಾ: ಶ್ರೀಕೃಷ್ಣ ಸಭಾಭವನ ತೆಂಕಣಕೇರಿ ಮತ್ತು ಯುವಕ ಮಂಡಳ ಕಟ್ಟಡ ನಿರ್ಮಾಣಕ್ಕೆ ಶಾಸಕಿ ರೂಪಾಲಿ ನಾಯ್ಕ 5 ಲಕ್ಷರೂ. ನೆರವು ಮಂಜೂರಿಗೊಳಿಸಿದ್ದು, ಇದನ್ನು ಊರಿನ ಉಪಯೋಗಕ್ಕೆ ಅನುಕೂಲವಾಗುವಂತೆ ನಿರ್ಮಿಸಿಕೊಡುವುದಾಗಿ ಹೇಳಿದರು.
ಅವರು ಇಲ್ಲಿಯ ತೆಂಕಣಕೇರಿಯ ಶ್ರೀ ಕೃಷ್ಣ ಮಿತ್ರ ಮಂಡಳಿಯ 33 ನೇ ವರ್ಷಕೃಷ್ಣೋತ್ಸವ ಸಮಾರಂಭದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಊರಿನ ಪ್ರಾಥಮಿಕ ಶಾಲೆಗೆ ಮೂರುಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಮುಂಬರುವ ದಿನಗಳಲ್ಲಿ ತೆಂಕಣಕೇರಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. 33 ವರ್ಷಗಳ ಕಾಲ ಕೃಷ್ಣ ಉತ್ಸವವನ್ನು ನಿರಂತರ ನಡೆಸಿಕೊಂಡು ಬಂದಿರುವ ಮಂಡಳಿಯ ಕಾರ್ಯವನ್ನು ಅವರು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿಯ ಪರವಾಗಿಅಧ್ಯಕ್ಷ ಮಂಜುನಾಥಎನ್. ನಾಯ್ಕ, ಗೌರವಾಧ್ಯಕ್ಷ ಶಿವಾನಂದ ವಿ. ರಾಯ್ಕರ್, ಉಪಾಧ್ಯಕ್ಷ ಪ್ರದೀಪ ಉ.ನಾಯ್ಕ, ಕಾರ್ಯದರ್ಶಿ ಪ್ರದೀಪ ಜಿ. ನಾಯ್ಕ ಮತ್ತು ಮಂಡಳಿಯ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ, ಗೌರವಿಸಿದರು.
ಗ್ರಾಮ ಪಂಚಾಯತಅಧ್ಯಕ್ಷೆ ಸೀಮಾ ಸುಧೀರ ನಾಯ್ಕ, ಸದಸ್ಯರಾದ ಜಯಂತ ರಾಮಚಂದ್ರ ನಾಯ್ಕ, ಸಂತೋಷ ನಾರಾಯಣ ನಾಯ್ಕ, ಹಿರಿಯರಾದ ರಾಮಚಂದ್ರ ವೆಂಕಟೇಶ ನಾಯ್ಕ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ಹಾಜರಿದ್ದರು. ಪತ್ರಕರ್ತ ವಿಠ್ಠಲದಾಸಕಾಮತ್ ಪ್ರಾಸ್ತಾವಿಕ ಮಾತನಾಡಿದರು.