• first
    second
    third
    previous arrow
    next arrow
  • ಶಿಕ್ಷಕ ವೃತ್ತಿ ಅತೀ ಶೇಷ್ಠವಾದದ್ದು; ಉಪೇಂದ್ರ ಪೈ

    300x250 AD

    ಶಿರಸಿ: ವೃತ್ತಿ ಬದುಕಿನಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು, ನಾವು ಮಾಡುವ ಕಾರ್ಯ ಮಕ್ಕಳಿಗೆ ಪ್ರೇರೆಪಣೆಯಾಗಿ ಅವರ ಭವಿಷ್ಯ ರೂಪಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಶಿಕ್ಷಕರ ಬದುಕು ಸಾರ್ಥಕ ಎಂದು ಉದ್ಯಮಿ ಉಪೇಂದ್ರ ಪೈ ಹೇಳಿದರು.


    ಅವರು ತಾಲೂಕಿನ ಬಂಡಲ ಸರ್ಕಾರಿ ಪ್ರೌಢ ಶಾಲೆಯ 140 ವಿದಾರ್ಥಿಗಳಿಗೆ ಉಪಮದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಉಚಿತ ಪಠ್ಯ ಪುಸ್ತಕ ವಿತರಿಸಿ ಮಾತನಾಡಿದರು. ಹೆಚ್ಚಿನ ಬಡ ಕೂಲಿ ಕಾರ್ಮಿಕರ ಮತ್ತು ಸಣ್ಣ ಕೃಷಿ ಕುಟುಂಬದ ವಿದ್ಯಾರ್ಥಿಗಳು ತುಂಬಿರುವಂತಹ ಬಂಡಲ ಸರ್ಕಾರಿ ಪ್ರೌಢ ಶಾಲೆ ಅನೇಕ ವರ್ಷಗಳಿಂದ ಗುಣಾತ್ಮಕ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು.ಮಕ್ಕಳು ಶಾಲೆಯಿಂದಲೇ ನಾಯಕತ್ವ ವಹಿಸಿ ಜವಾಬ್ದಾರಿ ನಿಭಾಯಿಸುವುದನ್ನು ಕಲಿತರೆ, ಭವಿಷ್ಯದಲ್ಲಿ ಸಮಾಜದ ರಥವನ್ನು ನಡೆಸುವ ಸಾರಥಿಗಳೂ ಆಗಬಹುದು ಎಂದರು.

    300x250 AD

    ಈ ವೇಳೆ ಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕರು ಇದ್ದರು.

    Share This
    300x250 AD
    300x250 AD
    300x250 AD
    Back to top