ಶಿರಸಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ, ಜಿಲ್ಲೆಯಲ್ಲಿ ಶೇ. 40ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಮಹಿಳಾ ಸದಸ್ಯರಿರುವ ಕಾರಣ ಬಿಜೆಪಿ ಅಭ್ಯರ್ಥಿಗೆ ಅನುಕೂಲ ಆಗಲಿದೆ ಎಂದು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.
ಇದು ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವಿಗೆ ಪ್ರಮುಖ ಅಂಶವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳಾ ಪರ ಯೋಜನೆ ಜಾರಿ ಮಾಡಿವೆ. ಸಾಕಷ್ಟು ಸೌಲಭ್ಯ ನೀಡುತ್ತಿವೆ. ಇದು ಮಹಿಳೆಯರು ಬಿಜೆಪಿಯತ್ತ ವಾಲಲು ಕಾರಣವಾಗಿದೆ. ಸರ್ಕಾರ ಒಳ್ಳೆಯ ಕೆಲಸಗಳನ್ನು ಜನತೆಯ ಮುಂದಿಡುತ್ತಿದ್ದು, ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸಲಾಗುತ್ತಿದೆ ಎಂದರು.
ಈ ವೇಳೆ ಮೋರ್ಚಾ ಪದಾಧಿಕಾರಿಗಳಾದ
ಪ್ರಭಾವತಿ ಗೌಡ, ದೀಪಾ ಮಹಾಲಿಂಗಣ್ಣನವರ, ಶರ್ಮಿಳಾ ಮಾದನಗೇರಿ, ರೇಖಾ ಹೆಗಡೆ, ಚಂದ್ರಕಲಾ ಭಟ್ಟ ಇತರರಿದ್ದರು.