• first
  second
  third
  previous arrow
  next arrow
 • ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ಸಚ್ಚಿದಾನಂದ ಶ್ರೀ ಚಾಲನೆ; ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ

  300x250 AD

  ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ನಡೆದುಕೊಂಡು ಬಂದಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ದ್ವಾದಶ ಸಮಾರಂಭ ಕೆರೆಮನೆ ಬಯಲು ರಂಗಮಂದಿರದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಕಲಾಜ್ಯೋತಿ ಬೆಳಗಿಸುವುದರ ಮೂಲಕ ಶುಭಾರಂಭಗೊಂಡಿತು.

  ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಸ್ಕøತಿ ಬೆಳೆಸುವುದರಲ್ಲಿ ಕಲಾ ವಿನಿಮಯ ಅವಶ್ಯಕವಾಗಿದೆ. ಈ ಕಾರ್ಯ ನಾಟ್ಯೋತ್ಸವ ಜಬ್ಧಾರಿಯುತವಾಗಿ ಮಾಡುತ್ತಿದೆ ಎಂದರು. ಕಲೆಯಿಂದ ಕಲಾವಿದನ ವಿಸ್ತಾರವೇ ಹೊರತು ಕಲಾವಿದನಿಂದ ಕಲೆ ಅಲ್ಲಾ ಎಂದು ಅಭಿಪ್ರಾಯಪಟ್ಟು, ಸಮಷ್ಠಿ ರೂಪದಲ್ಲಿ ಎಲ್ಲಾ ಕಲಾ ಪ್ರಕಾರಗಳನ್ನು ಬೆಳೆಸಿ ಭಾರತದ ಸಂಸ್ಕೃತಿಯನ್ನು ವಿಸ್ತರಿಸಬೇಕೆಂದು ಆಶೀರ್ವದಿಸಿದರು.

  ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್, ಪದ್ಮಶ್ರೀ ಡಾ. ಬಿ.ಜಯಶ್ರೀ, ಬೆಂಗಳೂರು ಇವರ ಕಲಾಪಥವನ್ನು, ಕಲಾವಂತಿಕೆಯ ವಿಸ್ತಾರವನ್ನು ಸಭೆಗೆ ತಿಳಿಸಿ ಅಭಿನಂದಿಸಿದರು.

  ಅಪ್ರತಿಮ ಕಲಾಮೇರು ಪ್ರತಿಭೆ ಕೆರೆಮನೆ ಶಿವಾರಾಮ ಹೆಗಡೆ ಪ್ರಶಸ್ತಿಯನ್ನು ಪದ್ಮಶ್ರೀ ರಂಗಭೂಮಿ ಕಲಾವಿದೆಯಾದ, ರಾಜ್ಯಸಭಾ ಮಾಜಿ ಸದಸ್ಯೆ ಡಾ. ಬಿ.ಜಯಶ್ರೀಯವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ.ಜಯಶ್ರೀ ಶಂಭು ಹೆಗಡೆಯವರ ಸಂಗಡ ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಆ ವೇದಿಕೆಯಲ್ಲಿ ಅಕಸ್ಮಾತ್ ಯಕ್ಷಗಾನ ಸ್ತ್ರೀವೇಷ ಮಾಡಿದ ನೆನಪು ಮಾಡಿಕೊಂಡರು. ರಂಗಭೂಮಿಯ ಕಲಾವಿದೆಯಾದ ನನಗೆ ಯಕ್ಷಗಾನ ರಂಗಭೂಮಿಯ ಶ್ರೇಷ್ಠ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಪಡೆದು ಧನ್ಯನಾಗಿದ್ದೇನೆ. ನಾಟ್ಯೋತ್ಸವದಲ್ಲಿ ನೀಡುವ ಈ ಪ್ರಶಸ್ತಿ ಕಲಾ ವಿಸ್ತಾರದ ಸಂಕೇತವಾಗಿದೆ. ಇದನ್ನು ಪಡೆದ ನನಗೆ ರಂಗ ವಿಸ್ತಾರದ ಜವಾಬ್ಧಾರಿ ಹೆಚ್ಚಿದೆ ಎಂದರು.

  ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಯಕ್ಷಗಾನ ಕಲಾವಿದರಾದ ರಾಜೀವ ಶೆಟ್ಟಿ, ಹೊಸಂಗಡಿ, ದಯಾನಂದ ಬಳೆಗಾರ, ನಾಗೂರು, ಸಂಘಟಾಕ ಸೂರ್ಯನಾರಾಯಣ ಪಂಜಾಜೆ, ಮತ್ತು ಮರಣೋತ್ತರವಾಗಿ ಗುಂಡಿಬೈಲು ಸುಬ್ರಾಯ ಭಟ್, ಮತ್ತು ಕೃಷ್ಣ ಭಂಡಾರಿಯವರಿಗೆ ನೀಡಿ ಪುರಸ್ಕರಿಸಲಾಯಿತು. ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ ಸ್ವೀಕರಿಸಿ ರಾಜೀವ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ಭಾವ ಪ್ರಪಂಚವನ್ನು ನೀಡಿದ ಮೇಳವೆಂದರೆ ಇಡಗುಂಜಿ ಯಕ್ಷಗಾನ ಮೇಳ ಎಂದು ಅಭಿಪ್ರಾಯಪಟ್ಟರು. ಸಾಧನೆಯು ಸಾಧಕರ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂದರು.

  300x250 AD

  ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಡಾ. ಹೆಚ್. ಎಸ್. ಪ್ರಕಾಶ ಮಾತನಾಡುತ್ತಾ, ರಂಗಭೂಮಿಯಲ್ಲಿ ನಟನ ಸಾಮಥ್ರ್ಯವು ಮುಖ್ಯವಾಗಿದ್ದು, ಆತನ ಕಲಾ ಪ್ರದರ್ಶನದ ಅಭಿವ್ಯಕ್ತಿ, ಅನುಭೂತಿ ಮತ್ತು ಪಾತ್ರದ ಜೀವಂತಿಕೆ ಮುಖ್ಯವಾಗಿರುತ್ತದೆ ಎಂದರು. ರವಿಕುಮಾರರವರು ಮಾತನಾಡುತ್ತಾ ಅಭಿನವ ಪ್ರಕಾಶನವು 750 ಕ್ಕಿಂತಲೂ ಪುಸ್ತಕ ಪ್ರಕಟಿಸಿದ ಖ್ಯಾತಿ ಇರುವ ನಮ್ಮ ಪ್ರಕಾಶನವು ಯಕ್ಷಗಾನ ಮಿಮಾಂಸೆಯ ಬಗ್ಗೆ ಅಧ್ಯಯನವಾಗಿ ದಾಖಲೀಕರಣ ರೂಪದಲ್ಲಿ ಪುಸ್ತಕ ಬಿಡುಗಡೆಯಾಗಬೇಕೆಂದರು. ಅದನ್ನು ಪ್ರಕಟಿಸುವ ಭಾಗ್ಯದ ಜವಾಬ್ದಾರಿಯನ್ನು ಅಭಿನವ ಪ್ರಕಾಶನ ಪಡೆಯುತ್ತದೆ ಎಂದರು.

  ಗ್ರಾ.ಪಂ ಅಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ಗುಣವಂತೆ ಗ್ರಾಮ ಜಗತ್ತಿನ ನಕಾಶೆಯಲ್ಲಿ ಗುರುತಿಸಲು ಕಾರಣವಾದದ್ದು ಯಕ್ಷಗಾನ ಎಂದರು. ಸಭಾಧ್ಯಕ್ಷತೆ ವಹಿಸಿದ ಡಾ. ಎಂ. ಪ್ರಭಾಕರ ಜೋಶಿಯವರು ಮಾತನಾಡುತ್ತಾ ಚೈನೀಸ್ ಅಪೇರಾ ಎಂಬ ಕಲಾ ಪ್ರಕಾರ ಹೊನ್ನಾವರದ ಬುದ್ಧ ಧರ್ಮದ ಅನುಯಾಯದವರಿಂದ ಮುಂದುವರಿದಿದೆ ಎಂಬ ವಿಷಯ ಅಧ್ಯಯನಕ್ಕೆ ಒಳಪಡಬೇಕೆಂದರು. ಯಕ್ಷಗಾನ ಕ್ಷೇತ್ರಕ್ಕೆ ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ಅನುದಾನ ಬಂದು ಈ ಕ್ಷೇತ್ರ ವಿಕಾಸಕ್ಕೆ ಕಾರಣವಾಗಬೇಕೆಂದು ಆಗ್ರಹಿಸಿದರು. ಆಧುನಿಕ ಅಪೇಕ್ಷೆಗಳನ್ನು ಉನ್ನತೀಕರಿಸುವ ಸಾಧ್ಯತೆಗಳಿಗೆ ಮೂಲವಾದ ಕಲಾಕೇಂದ್ರಗಳಿಗೆ ಸರಕಾರ ಅನುದಾನ ನೀಡಿ ಕಲಾಪ್ರಕಾರಗಳನ್ನ ಬೆಳೆಸಬೇಕೆಂದರು.

  ಕುಡಿಯುವ ನೀರಿನ ಘಟಕವನ್ನು ಕಲಾಮಂದಿರಕ್ಕೆ ನೀಡಿದ ಶಂಕರ ಐತಾಳರವರನ ಸನ್ಮಾನಿಸಲಾಯಿತು. ಅಗಲಿದ ಕಲಾಚೇತನ ಕಲಾವಿದರನ್ನು ಸ್ಮರಿಸಿ ಮೌನಚರಣೆಯೊಂದಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಈ ದಿನದ ನಾಟ್ಯೋತ್ಸವವನ್ನು ಹಿರಿಯ ಕಲಾವಿದರಾದ ತಿಮ್ಮಣ್ಣ ಯಾಜಿ ಮಣಗೆ, ನಾರಾಯಣ ಹಾಸ್ಯಗಾರ ಕರ್ಕಿ ಹಾಗೂ ಎಂ.ಎ. ಹೆಗಡೆಯವರ ಕಲಾಪಥವನ್ನು ಸ್ಮರಿಸಿ ಸಮರ್ಪಣೆ ಮಾಡಲಾಯಿತು. ಮಂಡಳಿ ನಡೆಸಿದ ಯಕ್ಷಗಾನ ಭಾಗವತಿಕೆ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

  ಸಭಾ ಕಾರ್ಯಕ್ರಮದ ನಂತರ ಶ್ರೀ ಕಣ್ಣೇಶ್ವರ ಜಾನಪದ ಕಲಾಸಂಘ ಕಣ್ಣೂರು, ಸಾಗರ ಇವರಿಂದ ಡೊಳ್ಳು ಕುಣಿತ ಪ್ರದರ್ಶಿಸಲ್ಪಟ್ಟಿತು. ಧರಣಿ ಟಿ. ಕಶ್ಯಪ ಮತ್ತು ತಂಡದವರು ಮಂಡೋಧರಿ ಕಲ್ಯಾಣವೆಂಬ ಆಖ್ಯಾನವನ್ನು ಪ್ರಸ್ತುತಪಡಿಸಿದರು. ಪದ್ಮಶ್ರೀ ಪುರಸ್ಕøತ ಡಾ. ಬಿ. ಜಯಶ್ರೀಯವರ ಸ್ಪಂದನ ತಂಡದವರು ಲಕ್ಷಾಪತಿ ರಾಜನ ಕತೆ ಎಂಬ ನಾಟಕವನ್ನು ಮನೋಜ್ಞವಾಗಿ ಪ್ರದರ್ಶಿಸಿದರು.

  Share This
  300x250 AD
  300x250 AD
  300x250 AD
  Back to top