• first
    second
    third
    previous arrow
    next arrow
  • ಪದ್ಮಶ್ರೀ ಪುರಸ್ಕೃತ ತುಳಸಿ-ಸುಕ್ರಿ ಗೌಡರಿಗೆ ಸನ್ಮಾನ

    300x250 AD


    ಅಂಕೋಲಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆ ತುಳಸಿ ಗೌಡ ಹಾಗೂ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ ಅವರ ಮನೆಗೆ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ಘಟಕದವರು ಭೇಟಿಯಾಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.


    ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಡಿ ನಾಯ್ಕ ಮಾತನಾಡಿ, ಹಿಂದುಳಿದ ವರ್ಗದ ಇಬ್ಬರು ಮಹಾನ್ ಸಾಧಕರಿಗೆ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅವರ ಅನುಪಮ ಸೇವೆ ಗಮನಾರ್ಹವಾದುದು. ಅವರ ಕಷ್ಟದ ಬದುಕಿಗೆ ಸಂಘ, ಸಂಸ್ಥೆಗಳು ಉದಾರತೆ ತೋರಿ ಅವರಿಗೆ ಸಹಾಯಹಸ್ತ ಚಾಚುವುದು ಸೂಕ್ತ. ಈ ದಿಸೆಯಲ್ಲಿ ಸರ್ಕಾರಿ ನೌಕರರ ಸಂಘ ಸದಾ ಅವರ ಬೆಂಗಾವಲಾಗಿ ಇರಲಿದೆ ಎಂದರು.

    300x250 AD

    ಸಂಘದ ಉಪಾಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯದರ್ಶಿ ಎನ್.ಆರ್.ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top