ಹೊನ್ನಾವರ: ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಆಯೋಜಿಸಿದ್ದ ಆರ್.ಡಿ.ಪಿ.ಆರ್ ಕ್ರೀಡಾಕೂಟದಲ್ಲಿ ತಾಲೂಕಿನಿಂದ ಪ್ರತಿನಿಧಿಸಿ ವಿಜೇತರಾದ ಸ್ಪರ್ಧಿಗಳಿಗೆ ತಾಲೂಕಾ ಪಂಚಾಯತ ವತಿಯಿಂದ ಅಭಿನಂದಿಸಿದರು.
ಶಿರಸಿಯಲ್ಲಿ ನಡೆದ ಆರ್.ಡಿ.ಪಿ.ಆರ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊನ್ನಾವರ ತಾಲೂಕು ಪುರುಷರ ವಾಲಿಬಾಲ್‍ನಲ್ಲಿ ಪ್ರಥಮ, ಮಹಿಳಾ ತ್ರೋಬಾಲ್‍ನಲ್ಲಿ ಪ್ರಥಮ, ಬ್ಯಾಡ್ಮಿಂಟನ್ ಡಬಲ್ಸ್‍ನಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಗಳಿಸಿಕೊಂಡಿದೆ.
ಕ್ರೀಡೆಯಲ್ಲಿ ಸಾಧನೆ ಮಾಡಿದ ಅಧಿಕಾರಿಗಳಿಗೆ ತಾಲೂಕಾ ಪಂಚಾಯತ ಅಭಿನಂದಿಸಿ, ಗೌರವಿಸಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎ.ಡಿ. ಕೃಷ್ಣಾನಂದ ಎ. ಮಾತನಾಡಿ, ಒತ್ತಡದ ಕೆಲಸದ ನಡುವೆಯೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಇಷ್ಟೊಂದು ಪ್ರಶಸ್ತಿಗಳಿಸಿರುವುದು ಖುಷಿ ತಂದಿದೆ. ಇದು ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಸಾಧನಾ ಬರ್ಗಿ ಹಾಗೂ ತಾಲೂಕಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.