ಕುಮಟಾ: ಮಂಬೈನ ರಿವಾಜ್ ಸಂಸ್ಥೆಯ ಅಪೂರ್ವ ಪ್ರೊಡಕ್ಷನ್ ಇನ್ಸಿಂಕ್ ಸಂಗೀತ ವಾಹಿನಿಗಾಗಿ ಥಾಣೆಯ ಡಾ.ಕಾಶೀನಾಥ ಘಾನೇಕರ್ ಆಡಿಟೋರಿಯಂನಲ್ಲಿ ಆಯೋಜಿಸಿದ ’ನವರಂಗ ನಯೀ ಉಮಂಗ್ ನಯೀ ತರಂಗ್’ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಂಡದಕುಳಿ ಮೂಲದ ಕಿಶೋರ ಹೆಗಡೆ ಬಾನ್ಸುರಿ ವಾದನದಲ್ಲಿ ರಾಗ್ ಮುಲ್ತಾನಿ ನುಡಿಸಿ ಜನ ಮನ ಸೂರೆಗೊಂಡರು.
ಈ ಕಾರ್ಯಕ್ರಮ ’ಇನ್ಸಿಂಕ್ ಸಂಗೀತ ವಾಹಿನಿ’ಯಲ್ಲಿ ಪ್ರಸಾರವಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಅವರಿಗೆ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಅರಸಿ ಬಂದು ಸಂಗೀತ ಶಾರದೆಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲಿ ಎಂಬುದು ಸಂಗೀತಾಭಿಮಾನಿಗಳೆಲ್ಲರ ಹಾರೈಕೆಯಾಗಿದೆ.