ತಾಲೂಕಿನ ಹಸರಗೋಡ ಪಂಚಾಯತದಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಯಲುಗಾರು ಮತ್ತು ಮುತ್ಮುರ್ಡು ಗ್ರಾಮಗಳ ಗ್ರಾಮದೇವರಾದ ಶ್ರೀ ಕಲ್ಯಾಣೇಶ್ವರ ದೇವಸ್ಥಾನ ಕುಚಗುಂಡಿಯಲ್ಲಿ ಡಿ.4 ಶನಿವಾರ ವಾರ್ಷಿಕ ಕಾರ್ತಿಕೋತ್ಸವವನ್ನು ಸರಳವಾಗಿ ಕೊವಿಡ್ ನಿಯಮ ಪಾಲಿಸಿ ಭಕ್ತಿ- ಶ್ರದ್ಧೆಯಿಂದ ಹಣತೆ ಹಚ್ಚುವುದರ ಮೂಲಕ ಆಚರಿಸಲಾಯಿತು.
ಮಹಾದೇವನಿಗೆ ಗ್ರಾಮಸ್ಥರು ಹಣ್ಣು-ಕಾಯಿ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ಕೃತಾರ್ಥರಾದರು. ದೇವಸ್ಥಾನಕ್ಕೆ ಆಗಮಿಸಿದ ನೂರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಇದೆ ಸಂರ್ಭದಲ್ಲಿ ದಿ. ಶ್ರೀಮತಿ ಮತ್ತು ಶ್ರೀ ಗಣಪತಿ ಗಣೇಶ ಹೆಗಡೆ ಶೇಡಿದಂಟ್ಕಲ್ ಇವರ ಸ್ಮರಣಾರ್ಥ ದಯಾ ರಾಮಚಂದ್ರ ಹೆಗಡೆ ಶೇಡಿದಂಟ್ಕಲ್ ಇವರು ಕಲ್ಯಾಣೇಶ್ವರ ದೇವಸ್ಥಾನಕ್ಕೆ ರೂ.10,500.00 ಮೌಲ್ಯದ ಗ್ರೈಂಡರ್ ಅನ್ನು ಕೊಡುಗೆ ನೀಡಿದರು. ಇವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಮಸ್ತ ಭಕ್ತಾದಿಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.