• Slide
    Slide
    Slide
    previous arrow
    next arrow
  • ಮಾಳ್ಕೋಡ ಬೋಳುಕಟ್ಟೆ ಪರಿಸರ ಮಲೀನ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ; ಪೊಲೀಸರಿಗೆ ಮನವಿ

    300x250 AD


    ಹೊನ್ನಾವರ: ಇಲ್ಲಿನ ಮಾಳ್ಕೋಡ್-ಬೋಳುಕಟ್ಟೆ ಪರಿಸರದಲ್ಲಿ ಸ್ವಚ್ಛತೆ ಹಾಳು ಮಾಡಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿನ ಪರಿಸರ ಹಾಳು ಮಾಡುವವ ಮೇಲೆ ಸೂಕ್ತ ರೀತಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಇಡಗುಂಜಿ ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸದಸ್ಯರು ಮತ್ತು ಪರಿಸರ ಪ್ರೇಮಿಗಳು ಶುಕ್ರವಾರ ಮಂಕಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.

    ಮೇಲಿನ ಇಡಗುಂಜಿ ಗ್ರಾಮ ಪಂಚಾಯತ ಮಾಳ್ಕೋಡ್ ಬೋಳುಕಟ್ಟೆಯಲ್ಲಿ ಪ್ರಸಕ್ತ ವರ್ಷದ ಏಪ್ರಿಲ್ 5ರಂದು ಪಂಚಾಯತ ಅಧ್ಯಕ್ಷರು, ಸದಸ್ಯರು ಮತ್ತು ಪರಿಸರ ಪ್ರೇಮಿಗಳು ಸ್ವಚ್ಛತಾ ಅಭಿಯಾನ ನಡೆಸಿ, ಇಲ್ಲಿ ಅನೈತಿಕ ಚಟುವಟಿಕೆ ನಡೆಯುವ ಬಗ್ಗೆ ಅಧಿಕಾರಿಗಳಿಗೂ ತಿಳಿಸಿ, ಕಡಿವಾಣ ಹಾಕಲು ಮುಂದಾಗಿದ್ದರು. ಆದರೆ ಈ ಭಾಗದಲ್ಲಿ ಪುನಃ ಸಂಜೆಯಾಗುತ್ತಲೇ ಕೆಲ ಕಿಡಿಗೇಡಿಗಳು ಮದ್ಯದ ಬಾಟಲಿ ಹಿಡಿದು ಕುಳಿತುಕೊಳ್ಳುವುದರಿಂದ ಈ ಭಾಗದಲ್ಲಿ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

    ಕೋಳಿಯ ತ್ಯಾಜ್ಯ, ಪ್ಲಾಸ್ಟಿಕ್ ಇವೆಲ್ಲವನ್ನೂ ಬೇಕಾಬಿಟ್ಟಿ ಬಿಸಾಡುವುದು, ಮದ್ಯದ ಬಾಟಲಿ ಒಡೆದು ಹೋಗುತ್ತಿದ್ದು, ಇದರಿಂದ ಸಂಚಾರಕ್ಕೂ ಸಮಸ್ಯೆ ಆಗಿದೆ. ಗೋವುಗಳು ಈ ಭಾಗದಲ್ಲಿ ಸಂಚರಿಸುವಾಗ ಕಾಲಿಗೆ ಮದ್ಯದ ಬಾಟಲಿ, ಸೀಸ ಚುಚ್ಚಿ ಗಂಭೀರ ಗಾಯಗೊಂಡ ಘಟನೆಯು ಸಂಭವಿಸಿದೆ.

    300x250 AD

    ಶಾಲಾ ವಿದ್ಯಾರ್ಥಿಗಳು ಒಬ್ಬೊಬ್ಬರೆ ಸಂಚರಿಸುವಾಗ ತುಂಬಾ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ. ಮಂಕಿ ಪೆÇಲೀಸ್ ಠಾಣೆಯ ಪಿಎಸೈ ಅಶೋಕ್ ಮಾಳಾಬಾಗಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಡಗುಂಜಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ರಾಧಾ ನಾಯ್ಕ, ಸದಸ್ಯರಾದ ಜ್ಞಾನೇಶ್ವರ ಎಂ. ನಾಯ್ಕ, ಜಿ.ಕೆ.ಹೆಗಡೆ, ಗೋಪಾಲ ನಾಯ್ಕ, ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ ನಾಯ್ಕ, ಅಮ್ಗೂಸ್ ಗೌಡ ಹಾಗೂ ಊರ ನಾಗರಿಕರು ಮತ್ತು ಪರಿಸರ ಪ್ರೇಮಿಗಳು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top