ಅಂಕೋಲಾ: ವಿಶೇಷ ಚೇತನರಿಗೆ ನಮ್ಮಿಂದಾದಷ್ಟು ಸಹಾಯ ಮಾಡಬೇಕು. ಜೊತೆಯಲ್ಲಿ ಅವರನ್ನು ಪ್ರೀತಿಯಿಂದ ಕಾಣಬೇಕು. ಸರ್ಕಾರದಿಂದ ಇನ್ನಷ್ಟು ಸೌಲಭ್ಯ ಅವರಿಗೆ ಸಿಗುವಂತಾಗಲಿ ಎಂದು ಪತ್ರಕರ್ತ ಸುಭಾಷ್ ಕಾರೇಬೈಲ್ ಹೇಳಿದರು.
ಅವರು ವಿಶೇಷ ಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಕೈಲಾಗದವರಿಗೆ ಸಹಕರಿಸುವ ಕಾಯಕ ಮಾಡಲು ನನ್ನ ತಂದೆ ತಾಯಿ ಹೇಳಿದ ಮಾತನ್ನು ನಾನು ಪಾಲಿಸುತ್ತಾ, ನನ್ನ ಕೈಲಾದ ಸಹಕಾರವನ್ನು ವಿಶೇಷ ಚೇತನರಿಗೆ ನೀಡುತ್ತ ಬಂದಿದ್ದೇನೆ ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಅರುಣ ನಾಯ್ಕ ಮಾತನಾಡಿ, ಸರಕಾರದಿಂದ ಸಿಗುವ ಶೇ.5 ಅನುದಾನ ಸರಿಯಾಗಿ ವಿನಿಯೋಗವಾಗಬೇಕು. ತಾಲೂಕಿನಲ್ಲಿ ಒಟ್ಟೂ 21 ಗ್ರಾಪಂಗಳಿದ್ದು ಅಲ್ಲಿ ವಿಆರ್‍ಡಬ್ಲೂ ಮತ್ತು ಎಂಆರ್‍ಡಬ್ಲುಗಳು ಉತ್ತಮ ಕಾಯಕ ಮಾಡುತ್ತಿದ್ದು, ಎಲ್ಲರೂ ಸೇರಿ ಕಾರ್ಯಕ್ರಮ ನಡೆಸೋಣ ಎಂದರು.
ವಿಕಲಚೇತನರ ನೋಡೆಲ್ ಅಧಿಕಾರಿ ಸವಿತಾ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯ ನಾಯ್ಕ ಕೇಕ್ ಕತ್ತರಿಸುವುದರ ಮೂಲಕ ವಿಕಲಚೇತನರ ದಿನಾಚರಣೆ ಆಚರಿಸಿದರು. ಎಂಆರ್‍ಡಬ್ಲ್ಯೂ ಕವಿತಾ ನಾಯ್ಕ ಸ್ವಾಗತಿಸಿದರು. ನಾರಾಯಣ ನಾಯ್ಕ ನಿರ್ವಹಿಸಿದರು. ನಾಗೇಂದ್ರ ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿಆರ್‍ಡಬ್ಲ್ಯೂಗಳು ಉಪಸ್ಥಿತರಿದ್ದರು.