• first
  second
  third
  previous arrow
  next arrow
 • ನಿಲ್ಲಿಸಿಟ್ಟ ಲಾರಿಗೆ ಬಸ್ ಡಿಕ್ಕಿ; ಐವರಿಗೆ ಗಾಯ

  300x250 AD


  ಭಟ್ಕಳ: ಟಿಪ್ಪರ್ ಲಾರಿಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಚಾಲಕ ನಿರ್ವಾಹಕ ಸೇರಿ ಐವರು ಗಾಯಗೊಂಡ ಘಟನೆ ಇಲ್ಲಿನ ಮಣ್ಕುಳಿಯ ಶೆಟ್ಟಿ ಗ್ಯಾರೆಜ್ ಎದುರುಗಡೆ ನಡೆದಿದೆ.

  ಈ ಅಪಘಾತದಲ್ಲಿ ಗಾಯಗೊಂಡ ಬಸ್ ಚಾಲಕ ರಾಜೀವ್ ತೆಕ್ಕಟ್ಟೆ, ನಿರ್ವಾಹಕ ಇಸ್ಮಾಯಿಲ್, ಪ್ರಯಾಣಿಕರಾದ ಖಲೀದ್ ಬೈಂದೂರು, ಅಸೀಪಾ, ರಾಘು ಕಾವಿಘ ಮತ್ತು ಸುದೀಪ್ ಮಂಗಳೂರು ಎಂದು ಗುರುತಿಸಲಾಗಿದೆ. ಭಟ್ಕಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಇಲ್ಲಿನ ಮಣ್ಕುಳಿಯ ಶೆಟ್ಟಿ ಗ್ಯಾರೇಜ್‍ನ ಎದುರಿನಿಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್‍ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD

  ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಮಣ್ಕುಳಿ ಭಾಗಗಳಲ್ಲಿ ಕಳೆದ ವಾರದಿಂದ 5 ಕ್ಕೂ ಹೆಚ್ಚು ಅಪಘಾತವಾಗಿದೆ. ಹೆದ್ದಾರಿಯ ಕೂಡು ರಸ್ತೆಗಳಲ್ಲಿ ಸರಿಯಾದ ಬ್ಯಾರಿಕೇಡ್ ಹಾಗೂ ಸೂಚನಾ ಫಲಕ ಅಳವಡಿಸದೇ ಇರುವುದರಿಂದ ಇಂತಹ ಅಪಘಾತಗಳು ಹೆಚ್ಚುತಿದ್ದು, ತಕ್ಷಣ ಇದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top