ಅಂಕೋಲಾ: ನಿಸ್ವಾರ್ಥ ಸೇವೆ ಮಾಡಿದಾಗ ಮುಂದೊಂದು ದಿನ ಅದರ ಪ್ರತಿಫಲ ಖಂಡಿತ ಸಿಗುತ್ತದೆ ಎಂದು ಹಿರಿಯ ಸಿವಿಲ್ ಮತ್ತು ಜೆಎಮಎಫ್‍ಸಿ ನ್ಯಾಯಾಧೀಶ ದಿನೇಶ.ಬಿ.ಜೆ. ಹೇಳಿದರು.
ಅವರು ವಕೀಲರ ಸಂಘ ಹಮ್ಮಿಕೊಂಡ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಪದ್ಮಶ್ರೀ ತುಳಸಿ ಗೌಡರು ಗಿಡ ನೆಡುವಾಗ ಯಾವ ಪ್ರಶಸ್ತಿ ಪುರಸ್ಕಾರವನ್ನೂ ಅಪೇಕ್ಷಿಸಿರಲಿಲ್ಲ ಆದರೆ ಅವರ ನಿಸ್ವಾರ್ಥ ಸೇವೆಗಾಗಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ. ವಕೀಲರು ಸಹ ತಮ್ಮ ವೃತ್ತಿಯನ್ನು ಕರ್ತವ್ಯ ಹಾಗೂ ನಿಸ್ವಾರ್ಥದಿಂದ ಕೈಗೊಂಡಾಗ ಅದರ ಪ್ರತಿಫಲ ಸಮಾಜಕ್ಕೂ ಸಿಗುತ್ತದೆ. ವಕೀಲರಲ್ಲಿಎಲ್ಲ ಅರ್ಹತೆಗಳೂ ಇರುತ್ತದೆ ಪ್ರಯತ್ನ ಮುಂದುವರಿಸುತ್ತಲೇಇರಬೇಕು. ವಕೀಲರು ಸಾಮಾಜಿಕ ನ್ಯಾಯಕ್ಕಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದರು.
ವಕೀಲರ ದಿನಾಚರಣೆ ನಿಮಿತ್ತಕಾರ್ಯಕ್ರಮದಲ್ಲಿ ವೃಕ್ಷಮಾತೆ ಪದ್ಮಶ್ರೀ ತುಳಸೀ ಗೌಡರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ನ್ಯಾಯವಾದಿ ನಿತ್ಯಾನಂದ.ಕವರಿ ಮತ್ತುಪಾಂಡು.ಅರ್.ನಾಯ್ಕಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದ್ಮಶ್ರೀ ತುಳಸೀ ಗೌಡ ಮಾತನಾಡಿ ಅವಕಾಶ ನೀಡಿದರೆ ಈಗಲೂ ಗಿಡ ನೆಡಲು ಹೋಗುತ್ತೇನೆ, ನಾನು ಗಿಡ ಬೆಳೆಸುವದರಲ್ಲೇ ಖುಷಿಪಟ್ಟಿದ್ದೇನೆ ನೀವೂ ಕೂಡಗಿಡ ಬೆಳೆಸಿ ಮಕ್ಕಳಿಗೂ ಗಿಡ ಬೆಳೆಸುವದಕ್ಕೆ ಹೇಳಿ ಎಂದರು.
ಸನ್ಮಾನಿತರಾದ ನಿತ್ಯಾನಂದಕವರಿ ಮತ್ತು ಪಾಂಡುಆರ್ ನಾಯ್ಕ ಮಾತನಾಡಿ ವಕೀಲರ ದಿನಾಚರಣೆಯ ಶುಭಾಶಯ ಕೋರಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದಅಧ್ಯಕ್ಷ ಸುರೇಶ ಬಾನಾವಳಿಕರ ಮಾತನಾಡಿದರು.
ವಿನೋದ ಶಾನಭಾಗ ಪ್ರಾಸ್ತಾವಿಕ ಮಾತನಾಡಿದರು, ಉಮೇಶ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ನಾಗಾನಂದ ಬಂಟ ಪ್ರಾರ್ಥಿಸಿದರು.ಬಿ.ಟಿ.ನಾಯಕ ವಂದಿಸಿದರು.