• first
  second
  third
  previous arrow
  next arrow
 • ‘ಸ್ಟಾಚ್ಯು ಆಪ್ ಯುನಿಟಿ’ಗೆ ಬೈಕ್ ಪ್ರವಾಸದಲ್ಲಿ ಪ್ರಸನ್ನ, ಗಿರೀಶ

  300x250 AD

  ಶಿರಸಿ: ನಗರದ ವೆಗಾ ಹೆಲ್ಮೆಟ್ ಹಾಗೂ ಆಟೊಪಾರ್ಟ ಡೀಲರ್ ಆಟೊ ಪಾಯಿಂಟ್ ಮಾಲಕರಾದ ಪ್ರಸನ್ನ ಸೀತಾರಾಮ ಭಟ್ಟ ಹಾಗೂ ಅಜ್ಜೀಬಳದ ಗಿರೀಶ ಮಂಜುನಾಥ ಹೆಗೆಡೆಯವರು ಜಗತ್ತಿನ ಅತಿ ಎತ್ತರದ ಪ್ರತಿಮೆಯಾದ ಗುಜರಾತ್ ನಲ್ಲಿನ “ಸ್ಟಾಚ್ಯು ಆಪ್ ಯುನಿಟಿ” ಗೆ ಪ್ರತ್ಯೇಕ ಬೈಕ್ ಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.

  ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರದಾರ ವಲ್ಲಬಭಾಯಿ ಪಟೇಲರ 157ಮೀ. ಎತ್ತರದ ಕಬ್ಬಿಣದ ಈ ಪ್ರತಿಮೆ ಹಲವು ಅಂತಸ್ತುಗಳನ್ನು ಹೊಂದಿದ್ದು ಗುಜರಾತ್ ರಾಜ್ಯದ ವಡೋದರಾದಿಂದ 150.ಕಿ.ಮೀ. ದೂರವಿರುವ ಕೆವೋಡಿಯಾ ಊರಿನ ನರ್ಮದಾ ನದಿಯ ತಟದಲ್ಲಿದೆ.

  300x250 AD

  ಸುಮಾರು 2500 ಕಿ.ಮೀ ದೂರದ ಈ ಪ್ರಯಾಣವನ್ನು ಪ್ರಸನ್ನರವರು ರೊಯಲ್ ಎನ್ ಫೀಲ್ಡ್ ಇಂಟರ್ ಸೆಪ್ಟರ್ (650 ) ಹಾಗೂ ಗಿರೀಶ ರವರು ಹೊಂಡಾ ಹೈನೆಸ್ (350 ) ಬೈಕ್ ನಲ್ಲಿ ಶಿರಸಿಯಿಂದ ಬೆಳಗಾವಿ, ಪೂನಾ,ಮುಂಬೈ ಮಾರ್ಗವಾಗಿ ಗುಜರಾತ್ ತಲುಪಲಿದ್ದು ಇವರಿಗೆ ಹವ್ಯಾಸಿ ಬೈಕ್ ರೈಡರ್ ಗಳು ಆತ್ಮೀಯರು ಕುಟುಂಬದವರು ಹಾಗೂ ಗ್ರಾಹಕರು ಶುಭ ಹಾರೈಸಿದ್ದಾರೆ.

  Share This
  300x250 AD
  300x250 AD
  300x250 AD
  Back to top