Slide
Slide
Slide
previous arrow
next arrow

ಆಮೆಗತಿಯಲ್ಲಿ ಕಣಕಣೇಶ್ವರ ಮುಖ್ಯರಸ್ತೆ; ಸಾರ್ವಜನಿಕರ ಪರದಾಟ

300x250 AD


ಅಂಕೋಲಾ: ಕಣಕಣೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವÀ ಮುಖ್ಯರಸ್ಥೆಯ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ದು ಈ ಮದ್ಯ ಏಕಾಏಕಿ ಅಂಗಡಿ ಮುಂಗಟ್ಟು ಹಾಗೂ ಮನೆಯ ಎದುರುಗಡೆ ತೋಡಿದ ಹೊಂಡದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಮೀನುಗಾರರ ಮುಖಂಡ ಹಾಗೂ ಜಿಲ್ಲಾ ಇಂಜಿನಿಯರ್ಸ ಸಂಘದ ಅಧ್ಯಕ್ಷ ಹರಿಹರ ವಿ ಹರಿಕಾಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಒಂದು ವಾರದ ಹಿಂದೆ ಬೆಳಗಿನ ಜಾವ ಏಕಾಏಕಿ ಅಂಗಡಿ ಮುಂಗಟ್ಟುಗಳು ತೆರೆಯುವ ಮುನ್ನ ಗುಂಡಿಗಳನ್ನು ತೋಡಿ ಕಣ್ಮರೆಯಾಗಿದ್ದು ಈಕುರಿತು ಪುರಸಭೆಯ ತಾಂತ್ರಿಕ ವರ್ಗದವರನ್ನು ವಿಚಾರಿಸಿದರೆ ಅದು ನಮಗೆ ಸಂಬಂದ ಪಟ್ಟದಲ್ಲ ಈ ಗಾಗಲೇ ನಾವು ಸದರಿ ರಸ್ಥೆಯ ಸಭಿವೃದ್ದಿಗೆ ಇತರ ಇಲಾಖೆಗೆ ಹಸ್ಥಾಂತರಿಸಲಾಗಿದೆ ಎಂಬ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಅಲ್ಲದೇ ಈ ಕುರಿತು ರಸ್ಥೆ ಗುತ್ತಿಗೆದಾರರನ್ನು ಪ್ರಸ್ನಿಸಿದಾಗ ಅದು ನಮ್ಮ ಕಾಮಗಾರಿಯಲ್ಲ ಎಂದು ಹೇಳುತ್ತಿದ್ದಾರೆ. ಇಲಾಖೆಯ ಇಂತಹ ಬೇಜವಾಬ್ದಾರಿಯಿಂದ ಈ ಹಿಂದೆ ಇದೇ ಜಾಗದ ಹೊಂಡದಲ್ಲಿ ಉತ್ತಮ ತಳಿಯ ದನ ಒಂದು ಬಿದ್ದು ಪ್ರಾಣಕಳೆದುಕೊಂಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ ಇಂತಹ ಅವಗಡಗಳು ಸಂಬವಿಸಿದರೆ ಹೊಣೆಗಾರರು ಯಾರು ಎಂಬುದನ್ನು ಪುರಸಭೆಯೇ ಉತ್ತರಿಸಬೇಕಾಗಿದೆ. ದಿನಿತ್ಯ ಸದರಿ ರಸ್ಥೆಯಿಂದಲೇ ಹಾದುಹೋಗುತ್ತಿರುವ ಇಲಾಖ ಅಧಿಕಾರಿಗಳು ಜನಪ್ರತಿನಿಧಿಗಳು ಮೌನ ವಹಿಸಿರುವುದು ಸಾರ್ವನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

300x250 AD


ತಕ್ಷಣ ಮಾನ್ಯ ಜನಾನುರಾಗಿ ತಹಸೀಲ್ದಾರ ಸಾಹೇಬರು ಮದ್ಯಪ್ರವೇಸಿಸಿ ಸದರಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top