• Slide
  Slide
  Slide
  previous arrow
  next arrow
 • 2 ಸ್ಕೂಟರ್’ಗಳ ನಡುವೆ ಡಿಕ್ಕಿ; ಸವಾರರಿಗೆ ಗಾಯ

  300x250 AD

  ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎರಡು ಸ್ಕೂಟಿಗಳ ನಡುವೆ ಡಿಕ್ಕಿ ಸಂಭವಿಸಿ ಅಪಘಾತವಾದ ಘಟನೆ ಉಸ್ಮಾನ ನಗರ ಕ್ರಾಸ್ ನಮೀಪ ನಡೆದಿದೆ. ಉಸ್ಮಾನ ನಗರ ಕ್ರಾಸನಿಂದ ಬೆಳಖಂಡ ರಸ್ತೆಗೆ ತೆರಳುತ್ತಿದ್ದ ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಯೊಬ್ಬಳು ಹಾಗೂ ಭಟ್ಕಳ ಸರ್ಕಲ್ ನಿಂದ ಬೆಳಕೆ ಕಡೆ ಹೋಗುತ್ತಿದ್ದ ಬೈಕ ಸವಾರನ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಎರಡೂ ಸ್ಕೂಟಿ ಸವಾರರು ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ಭಟ್ಕಳದಲ್ಲಿ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರದಂದು ಕೂಡ ಇದೆ ಸ್ಥಳದಲ್ಲಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು.

  300x250 AD

  ದಿನದಿಂದ ದಿನಕ್ಕೆ ಉಸ್ಮಾನ ನಗರದಿಂದ ಮಟ್ಕುಳಿ ಯವರಿಗೆ ರಸ್ತೆ ಅಪಘಾತ ಹೆಚ್ಚಾಗುತ್ತಿದೆ. ಚತುಷ್ಪಥ ಹೆದ್ದಾರಿಗೆ ಸೇರುವ ಒಳರಸ್ತೆಗಳ ಬಳಿ ಯಾವುದೇ ಸೂಚನಾ ಫಲಕ ಹಾಗೂ ಬ್ಯಾರಿಕೇಡ್ ಇಲ್ಲದ ಕಾರಣ ರಸ್ತೆ ಅಪಘಾತ ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆ, ಚತುಷ್ಪತ ಹೆದ್ದಾರಿಗೆ ಸೇರುವ ಒಳ ರಸ್ತೆಯು ಚತುಷ್ಪತ ಹೆದ್ದಾರಿಗಿಂತ ಕೆಳ ಭಾಗದಲ್ಲಿರುವುದು ಅಪಘಾತ ಹೆಚ್ಚಲು ಇನ್ನೊಂದು ಕಾರಣವಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top