• first
    second
    third
    previous arrow
    next arrow
  • ನಗರ ಸಭೆಗೆ 1ಲಕ್ಷ ರೂ ದೇಣಿಗೆ

    300x250 AD


    ಕಾರವಾರ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾರವಾರ ಜಿಲ್ಲಾ ವಕೀಲರ ಸಂಘದಿಂದ ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಹಾಗೂ ಗಿಡಗಳನ್ನು ನೆಡಲು 1 ಲಕ್ಷರೂ. ನಗರ ಸಭೆಗೆ ನೀಡಲಾಗುತ್ತಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಅನಿರುದ್ಧ ಹಳದೀಪುರ ಹೇಳಿದ್ದಾರೆ.

    ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಕೀಲರ ದಿನಾಚರಣೆ ಹಾಗೂ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಕಾರವಾರ ನಗರವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುವ ಉದ್ದೇಶದಿಂದ ಕಾರವಾರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗಿರುವ ಎರಡು ಉದ್ಯಾನವನದಲ್ಲಿ ಜಿಲ್ಲಾ ವಕೀಲರ ಸಂಘದ ಹೆಸರಿನಲ್ಲಿ ಗಿಡಗಳನ್ನು ನೆಡಲು ಒಂದು ಲಕ್ಷರೂ. ನಗರಸಭೆಗೆ ನೀಡಲಾಗಿದೆ.

    300x250 AD

    ಈ ಸಂದರ್ಭದಲ್ಲಿ ಈ ಉದ್ಯಾನವನಗಳಿಗೆ ಡಾ. ಬಾಬು ರಾಜೇಂದ್ರ ಪ್ರಸಾದ ಹಾಗೂ ಡಾ. ಅಬ್ದುಲ್ ಕಲಾಂ ಎಂದು ಹೆಸರಿಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ವಿ.ಜೆ. ಅರ್ಗೇಕರ್, ಖಜಾಂಚಿ ರಾಜೇಶ ಆಚಾರಿ, ಹಿರಿಯ ವಕೀಲ ಆರ್.ಎಸ್.ಗಾಳಿ, ಎಸ್.ಆರ್. ಬೇಳೂರಕರ್ ಇದ್ದರು.

    Share This
    300x250 AD
    300x250 AD
    300x250 AD
    Back to top