Slide
Slide
Slide
previous arrow
next arrow

ಕುಟುಂಬ ಸಮೇತ ಮುರುಡೇಶ್ವರಕ್ಕೆ ರಾಜ್ಯಪಾಲ ತಾವರ ಚಂದ್ ಗೆಹ್ಲೋತ್ ಭೇಟಿ

300x250 AD

ಭಟ್ಕಳ: ಕುಟುಂಬ ಸಮೇತ ಧಾರ್ಮಿಕ ಸ್ಥಳಗಳ ಪ್ರವಾಸದಲ್ಲಿರುವ ರಾಜ್ಯಪಾಲ ತಾವರ ಚಂದ್ ಗೆಹ್ಲೋತ್ ಅವರು ಶುಕ್ರವಾರ ಝಡ್ ಪ್ಲಸ್ ಭದ್ರತೆಯೊಂದಿಗೆ ಮುರುಡೇಶ್ವರಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವರ ದರ್ಶನ ಪಡೆಯುತ್ತಿರುವುದು ಮುರುಡೇಶ್ವರ ದೇವಸ್ಥಾನದಿಂದ ಮಹಾದ್ವಾರದ ತನಕ ಎರಡು ರಸ್ತೆ ಮಾರ್ಗವನ್ನು ಬಂದ್ ಮಾಡಲಾಗಿದ್ದು, ಎಲ್ಲಾ ಕಡೆ ಬ್ಯಾರಿಗೇಟ್ ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ ಪೆÇೀಲೀಸ್ ಸಿಬ್ಬಂದಿಗಳನ್ನು ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲು ನೇಮಿಸಲಾಗಿತ್ತು. ಎಲ್ಲಾ ಒಳ ಸಂಪರ್ಕ ರಸ್ತೆಗಳಿಗೂ ಬ್ಯಾರಿಗೇಟ್ ಹಾಕಲಾಗಿತ್ತು. ಮಾತ್ತೋಬಾರ ಶ್ರೀ ದೇವರಿಗೆ ರಾಜ್ಯಪಾಲ ಅವರು ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ ಕೆಲ ಕಾಲ ದೇವಸ್ಥಾನದ ಒಳಗೆ ಕುಳಿತು ವಿಶ್ರಾಂತಿ ಪಡೆಯಲು ವಿಶೇಷ ಆಸನದ ವ್ಯವಸ್ಥೆ ಮಾಡಿದ್ದರು. ದೇವರ ಪೂಜೆ ಬಳಿಕ ಮುರುಡೇಶ್ವರಕ್ಕೆ ಗಣ್ಯರು ಭೇಟಿ ನೀಡುವ ವೇಳೆ ದೇವಸ್ಥಾನದಲ್ಲಿ ದಾಖಲಿಸುವ ಗಣ್ಯರ ಭೇಟಿ ಪುಸ್ತಕಕ್ಕೆ ಸಹಿ ಹಾಕಿದರು. ನಂತರ ದೇವಸ್ಥಾನದ ಪ್ರಸಾದ ಪಡೆದು ದೇವರ ಆಶೀರ್ವಾದ ಪಡೆದು ದೇವಸ್ಥಾನದ ಕಮಿಟಿಯಿಂದ ಶಾಲು ಹೊದಿಸಿ ಗೌರವಿಸಿದರು.

300x250 AD

ಬಳಿಕ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ಜೈರಾಮ್ ಅಡಿ ಹಾಗೂ ಅರ್ಚಕ ವೃಂದದ ಪೂಜೆಯ ವಿಧಿ ವಿಧಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂತಸ ಪಟ್ಟರು. ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಒಂದು ಬಂದು ಬಳಿಕೆ ಎದುರಿನ ಗೋಪುರದೊಳಗೆ ಲಿಪ್ಪ ಮುಖಾಂತರ ಗೋಪುರದ ತುದಿಗೆ ತೆರಳಿ ಸುಂದರ ಮುರುಡೇಶ್ವರ ಸಮುದ್ರ ತೀರದ ಸೌಂದರ್ಯವನ್ನು ವೀಕ್ಷಿಸಿದರು. ಬಳಿಕ ಬ್ರಹತ್ ಶಿವನಮೂರ್ತಿಯ ವೀಕ್ಷಣೆಗೆ ಕಾರಿನಲ್ಲಿ ತೆರಳಿದ ಅವರು ಅಲ್ಲಿಯು ಸಹ ಕೆಲಕಾಲ ಓಡಾಡಿ ಮುರುಡೇಶ್ವರ ರಮಣೀಯತೆಯನ್ನು ಸವಿದರು. ನಂತರ ಮುರುಡೇಶ್ವರ ಆರ್.ಎನ್.ಎಸ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಅಲ್ಲಿಂದ ನೇರವಾಗಿ ಝಡ್ ಪ್ಲಸ್ ಭದ್ರತೆ ಜೊತೆಗೆ ಜಿಲ್ಲೆಯ ಪೆÇೀಲಿಸ್ ಬಿಗಿ ಬಂದೋಬಸ್ತ ಮಧ್ಯೆ ಗೋಕರ್ಣಕ್ಕೆ ತೆರಳಿದರು.

Share This
300x250 AD
300x250 AD
300x250 AD
Back to top