ಕಾರವಾರ: ಗೋವಾದಿಂದ ಸಮುದ್ರ ಹಾಗೂ ಕಾಳಿ ನದಿಯ ಮೂಲಕ ಕಾರವಾರಕ್ಕೆ ದೋಣಿಯಲ್ಲಿ ಮದ್ಯಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅಕ್ರಮ ಮದ್ಯ ಹಾಗೂ ನಾಡದೋಣಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಕದ್ರಾ ಸಿಪಿಐ ಗೋವಿಂದರಾಜ್ ಟಿ.ದಾಸರಿ ಅವರಿಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ತಾರೀವಾಡಾ ಬಳಿ ದಾಳಿ ನಡೆಸಿದ್ದಾಗ ಅಕ್ರಮ ಮದ್ಯ ಪತ್ತೆಯಾಗಿದೆ. ಸುಮಾರು 70 ಸಾವಿರ ರೂ. ಮೌಲ್ಯದ ಮದ್ಯ ಹಾಗೂ 50 ಸಾವಿ ರೂ.ಮೌಲ್ಯದ ಸಾರಾಯಿ ಸಾಗಾಟಕ್ಕೆ ಬಳಸಿದ್ದ ನಾಡಗೋಣಿ ಸಮೇಶ ವಶಕ್ಕೆ ಪಡೆಯಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಚಿತ್ತಾಕುಲಾ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.