• first
    second
    third
    previous arrow
    next arrow
  • ಅಪರಿಚಿತ ವ್ಯಕ್ತಿಗಳ ಬಗೆಗೆ ಗಮನವಿರಲಿ; ಸುರೇಶ ಯಳ್ಳೂರು

    300x250 AD

    ಶಿರಸಿ: ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಎಚ್ಚರಿಕೆಯಿಂದ ಸಮಾಜದಲ್ಲಿ ನಡೆಯುವ ಚಟುವಟಿಕೆಗಳ ಬಗೆಗೆ ನಿಗಾ ಇಡಬೇಕು. ಅಪರಿಚಿತ ವ್ಯಕ್ತಿಗಳ ಚಲನವಲನಕ್ಕೆ ಕಡಿವಾಣ ಹಾಕದಿದ್ದರೆ ಅಪಾಯಗಳು ಸಂಭವಿಸುತ್ತದೆ. ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ಸಹಿಸಲಾಗದು. ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಯಲ್ಲಾಪುರ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಸುರೇಶ ಯಳ್ಳೂರು ಅಭಿಪ್ರಾಯಪಟ್ಟರು.


    ಅವರು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಅಪರಾಧ ತಡೆ ಮಾಸಾಚರಣೆಯ ಜಾಗೃತ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಆಧುನಿಕತೆಯಲ್ಲಿ ಮೊಬೈಲ್ ಬಳಕೆಯಲ್ಲಿ ಒಳ್ಳೆಯ ಪರಿಣಾಮಗಳಿಗಿಂತ ಕೆಟ್ಟ ಪರಿಣಾಮಗಳು ಆಗುವ ಸಾಧ್ಯತೆ ಇದೆ. ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಕಠಿಣ ಕಾನೂನು ಇದೆ. ಪೆÇೀಲೀಸರಿಗೆ ತಕ್ಷಣ ಮಾಹಿತಿ ನೀಡುವುದರಿಂದ ಅಪರಾಧಿಗಳನ್ನು ಬೇಗ ಪತ್ತೆ ಮಾಡಬಹುದು. ಅಪರಾಧಿಗಳ ಹಿಂದೆ ಅವರ ಕೆಟ್ಟ ಸಹವಾಸ, ನಡತೆ ಕಾರಣ. ವರ್ತಮಾನದಲ್ಲಿ ಒಳ್ಳೆಯ ಸಂಸ್ಕಾರವನ್ನು ಮಕ್ಕಳಿಗೆ ಕೊಡುವ ಮೂಲಕ ಸಮಾಜದ ಶಾಂತಿ ಕಾಪಾಡಬೇಕು ಎಂದು ಹೇಳಿದರು.

    300x250 AD


    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಗ.ನಾ.ಕೋಮಾರ ವಹಿಸಿ ಮಾತನಾಡಿ ಸಾಮರಸ್ಯ ಇರುವ ಸಮಾಜದಲ್ಲಿ ಸಾಧನೆಗಳಿಗೆ ಅವಕಾಶವಿದೆ. ಸಾರ್ವಜನಿಕ ಹಿತವನ್ನು ಬಯಸಿ ಇಂದು ಬದುಕಬೇಕಿದೆ. ಮಾನವೀಯ ಮೌಲ್ಯ ಇರುವ ಸಮಾಜ ಬಹು ಬೇಗ ಸುಧಾರಿಸಬಲ್ಲದು. ಜನಪರವಾದ ನಿಲುವು ನಮ್ಮನ್ನು ಬೆಳೆಸುತ್ತದೆ ಎಂದರು.


    ಆರಕ್ಷಕರಾದ ಹರೀಶ, ಸೀಮಾ ಗೌಡ ಅಪರಾಧ ತಡೆ ಮತ್ತು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ಕುರಿತು ಕಾನೂನು ಪಾಲನೆಯ ಅಂಶಗಳ ಬಗೆಗೆ ವಿವರಿಸಿದರು. ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಸ್ ಟಿ ಬೇವಿನಕಟ್ಟಿ ನಿರ್ವಹಿಸಿ ವಂದಿಸಿದರು.

    Share This
    300x250 AD
    300x250 AD
    300x250 AD
    Back to top