• first
  second
  third
  previous arrow
  next arrow
 • ಶಿರಸಿ-ಕುಮಟಾ ಹೆದ್ದಾರಿ ರಸ್ತೆ ಕಾಮಗಾರಿ ವಿಳಂಬ; ಜಾನ್ಮನೆಯಲ್ಲಿ ರಸ್ತೆ ತಡೆದು ಪ್ರತಿಭಟನೆ

  300x250 AD

  ಶಿರಸಿ: ಕುಮಟಾ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಗುತ್ತಿಗೆದಾರರು ಮತ್ತು ಹೆದ್ದಾರಿ ಪ್ರಾಧಿಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿ ಮತ್ತು ಶಿರಸಿ ಸಮಗ್ರ ವೇದಿಕೆ ಸದಸ್ಯರು ತಾಲೂಕಿನ ಜಾನ್ಮನೆಯಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.


  ಶಿರಸಿ ಸಮಗ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಪರಮಾನಂದ ಹೆಗಡೆ ಮಾತನಾಡಿ, ಈ ರಸ್ತೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಅವಧಿ ಮಾತ್ರ ಇದ್ದರೂ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಈ ಮೊದಲು ಹೆಗಡೆಕಟ್ಟಾ ಕ್ರಾಸ್ ಬಳಿ ನಾವು ಪ್ರತಿಭಟನೆ ನಡೆಸಿದ್ದಾಗ ಕಾಮಗಾರಿ ತ್ವರಿತವಾಗಿ ನಡೆಸುವ ಭರವಸೆಯನ್ನು ಇಂಜಿನಿಯರ್, ಗುತ್ತಿಗೆದಾರರು ನೀಡಿದ್ದರು. ಆ ಬಳಿಕ ಕಾಮಗಾರಿ ಸ್ವಲ್ಪ ವೇಗ ಪಡೆದಿತ್ತಾದರೂ ಈಗ ಮತ್ತೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


  ಮಾರ್ಚ್ ಅಂತ್ಯದ ಒಳಗಾಗಿ ಬಂಡಲವರೆಗಿನ ರಸ್ತೆ ಎರಡೂ ಕಡೆಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ಇದುವರೆಗೆ ಶಿರಸಿ ಕಡೆಯಿಂದ ಮಾತ್ರ ರಸ್ತೆ ನಿರ್ಮಿಸಲಾಗುತ್ತಿದೆ. ಬಂಡಲ ಕಡೆಯಿಂದಲೂ ಕಾಮಗಾರಿ ಆರಂಭಿಸಿದರೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೆಲ ಕಾಗದ ಪತ್ರಗಳನ್ನು ನಾವು ಕೇಳಿ 40 ದಿನಗಳು ಕಳೆದರೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  300x250 AD


  ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ರಸ್ತೆ ನಿರ್ಮಾಣ ಕಾರ್ಯದಲ್ಲಿ ಜನರೇ ಗುತ್ತಿಗೆದಾರರಿಗೆ ಜಾಗೃತಿ ಮೂಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳಿನಿಂದ ಕೇವಲ ಒಂದೂವರೆ ಕಿ.ಮಿ ಮಾತ್ರ ರಸ್ತೆ ನಿರ್ಮಾಣವಾಗಿದೆ. ಹೀಗಾದರೆ ದೇವಿಮನೆ ಘಟ್ಟ ಪ್ರದೇಶದವರೆಗಿನ ರಸ್ತೆ ನಿರ್ಮಾಣಕ್ಕೆ ವರ್ಷಗಳೇ ಬೇಕಾಗಬಹುದು ಎಂಬ ಸಂಶಯ ಮೂಡುತ್ತಿದೆ. ರಸ್ತೆಯ ಈಗಿನ ದುಸ್ತಿತಿಯಿಂದ ಆಸ್ಪತ್ರೆಗೆ ತೆರಳುವ ರೋಗಿಗಳು, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ಹೋಗಲೇ ಸಾಧಯವಿಲ್ಲದ ಸ್ಥಿತಿ ಉಂಟಾಗಿದೆ ಎಂದರು.


  ಎಂ ಎಂ ಭಟ್ ಕಾರೆಕೊಪ್ಪ ಮಾತನಾಡಿ, ಕೆಲ ತಿಂಗಳಿನಲ್ಲಿಯೇ ರಾಜ್ಯದ ದೊಡ್ಡ ಜಾತ್ರೆಯಾದ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭಗೊಳ್ಳಲಿದೆ. ರಾಜ್ಯದ ಕರಾವಳಿ ಭಾಗದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ರಸ್ತೆ ಈ ರೀತಿ ಇದ್ದರೆ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದರು. ಪ್ರಮುಖರಾದ ನಾಗರಾಜ ನಾಯ್ಕ,ನಂದಕುಮಾರ ಜೋಗಳೆಕೆರ್, ರಘು ಕಾನಡೆ, ಮಹೇಶ ನಾಯ್ಕ, ಸುಬ್ರಹ್ಮಣ್ಯ ಹೆಗಡೆ ಇತರರಿದ್ದರು.

  ಮಳೆ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ. ಹಾಲಿ ಒಂದು ಕಿ ಮಿ ರಸ್ತೆ ಮುಕ್ತಾಯವಾಗಿದ್ದು, ಕೆಲ ದಿನದಲ್ಲಿ ಮತ್ತೆ ಎರಡು ಕಿ ಮಿ ಪೂರ್ಣಗೊಳ್ಳಲಿದೆ. -ಆರ್ ಬಿ ಪಾಟೀಲ್, ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್.

  Share This
  300x250 AD
  300x250 AD
  300x250 AD
  Back to top