ಶಿರಸಿ: ತಾಲೂಕಿನ ನೇರ್ಲವಳ್ಳಿ ದೇವಿಕೈ ಕಲ್ಲೆದೇವರ ಕಾಡಿನಲ್ಲಿರುವ ಈಶ್ವರ ದೇವಾಲಯದ ಕಾರ್ತೀಕ ಮಹೋತ್ಸವ ಡಿ.4 ಶನಿವಾರದಂದು ನಡೆಯಲಿದೆ.
ಸಾವಿರಾರು ವರ್ಷ ಹಳೆಯದಾದ ಈ ದೇವಾಲಯ ಶಿಥಿಲಾವಸ್ಥೆಯಲ್ಲಿತ್ತು. ದೇವಾಲಯದ ಆವರಣ ಶುಭ್ರಗೊಳಿಸಿರುವ ಇಲ್ಲಿಯ ಗ್ರಾಮಸ್ಥರು ಕಳೆದ ನಾಲ್ಕು ವರ್ಷಗಳಿಂದ ಕಾರ್ತೀಕ ಆಚರಣೆ ಮಾಡಿಕೊಂಡು ಬಂದಿದ್ದಾರೆ. ದೇವಸ್ಥಾನದ ಸಮೀಪದಲ್ಲಿ ಪುರಾತನ ಪಳೆಯುಳಿಕೆಗಳು ಲಭಿಸಿ ಕೌತುಕ ಮೂಡಿತ್ತು. ನಂತರ ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು, ಧಾರ್ಮಿಕ ಕಾರ್ಯಗಳನ್ನು ಸಹಾ ನಡೆಸಲಾಗುತ್ತಿದೆ. ದೇವಾಲಯದ ಕಾರ್ತೀಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ವಿನಂತಿಸಿದೆ.