ಶಿರಸಿ: ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ(ರಿ) ಶ್ರೀ ಸೊಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರು ಶ್ರೀ ಭಗವದ್ಗೀತಾ ಅಭಿಯಾನ 2021 ರ ಅಂಗವಾಗಿ ಡಿ.3 ರಂದು ಲಯನ್ಸ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಸ್ಫರ್ದೆಗಳಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ 10ನೇ ತರಗತಿಯ ಯಶಸ್ವಿನಿ ಹೆಗಡೆ (ಹಿರಿಯರ ವಿಭಾಗ, ಕಂಠಪಾಠ ಸ್ಪರ್ಧೆ), 5ನೇ ವರ್ಗದ ವರ್ಷಿಣಿ ಹೆಗಡೆ (ಕಿರಿಯರ ವಿಭಾಗ, ಕಂಠಪಾಠ) 5ನೇ ವರ್ಗದ ಅನ್ವಿತಾ ಹೆಗಡೆ(ಕಿರಿಯರ ವಿಬಾಗ, ಭಾಷಣ ಸ್ಫರ್ಧೆ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ಸಿಂಧೂರ್ ಭಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.