• first
    second
    third
    previous arrow
    next arrow
  • ಮುಂಡಿಗೆಕೆರೆ ಪಕ್ಷಿಧಾಮ: ಮಳೆಯೊಂದಿಗೆ ಮಾತು- ಕಥೆ

    300x250 AD

    ಶಿರಸಿ: 2015 ರಿಂದ ಸೋಂದಾ ಜಾಗೃತ ವೇದಿಕೆ (ರಿ) ಯು ಪ್ರತಿವರ್ಷ ಈ ಸರಹದ್ದಿನಲ್ಲಿ ಆದ ಮಳೆಯ ಪ್ರಮಾಣವನ್ನು ಅಧ್ಯಯನಕ್ಕೋಸ್ಕರ ದಾಖಲಿಸುತ್ತ ಬಂದಿದೆ. ಅದರಂತೆ 2021 ರ ಜನೇವರಿಯಿಂದ ನವೆಂಬರ ಕೊನೆಯವರೆಗೆ ಬಿದ್ದ ಮಳೆ, ಒಟ್ಟೂ 3042.8 ಮೀ.ಮೀ ಆಗಿದೆ. ಇಲ್ಲಿ 2019 ರಲ್ಲಿ ವಾರ್ಷಿಕ ಸರಾಸರಿ 716.2 ಮೀ.ಮೀ ಮಳೆ ಹೆಚ್ಚಾಗಿದ್ದರೆ 2020 ರಲ್ಲಿ 147.9 ಮೀ.ಮೀ ಮಳೆ ಕಡಿಮೆ ಆಗಿದೆ. ಪ್ರಸ್ತುತ ವರ್ಷ ಕಳೆದ ಸಾಲಿಗಿಂತ 35.7 ಮೀ.ಮೀ ಕಡಿಮೆ ಮಳೆ ದಾಖಲಾಗಿದೆ ಎಂದು ಜಾಗೃತಿ ವೇದಿಕೆ ಸೋಂದಾ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷದ ನವೆಂಬರ ತಿಂಗಳಲ್ಲಿ ಬಿದ್ದ ಮಳೆ ಪ್ರಮಾಣ ಅವಲೋಕಿಸಿದಾಗ ಈ ವರ್ಷ 215.6 ಮೀ.ಮೀ ಹೆಚ್ಚಿಗೆ ಮಳೆ ಆಗಿದೆ. (ಇದು ನೆವೆಂಬರ ತಿಂಗಳ ಅಂಕಿ- ಸಂಖ್ಯೆ ಹಿಂದಿನ 5 ವರ್ಷದಲ್ಲಿ 2 ಅಂಕಿ ಒಳಗಿನ ಅಲ್ಪ ಪ್ರಮಾಣದ ಮಳೆ ಇತ್ತು) ಇದೊಂದು ಸದ್ರಿ ವರ್ಷದ ನೆವೆಂಬರ ತಿಂಗಳ ದಾಖಲೆ ಮಳೆ ಆಗಿದೆ. ಕಳೆದ 5 ವರ್ಷಗಳಲ್ಲಿ ಡಿಸೆಂಬರ ತಿಂಗಳಲ್ಲಿ ಮಳೆ ಬಿದ್ದಿದ್ದು ಇಲ್ಲ. ಆದರೆ ಇದೇ ಪ್ರಥಮವಾಗಿ ಡಿಸೆಂಬರ 1 ರಂದು 12.6 ಮೀ.ಮೀ , 2 ರಂದು 10.2 ಮೀ.ಮೀ, 3 ರಂದು 00 ಮೀ ಮೀ ದಾಖಲಾಗಿದೆ.

    300x250 AD


    ಪ್ರಸ್ತುತ ಮಳೆಗಾಲದಲ್ಲಿ ಮುಂಡಿಗೆಕೆರೆ ಪಕ್ಷಿಧಾಮದಲ್ಲಿ ಸುರಿದ ಮಳೆ ಬೆಳ್ಳಕ್ಕಿಗಳ ಸಂತಾನಾಭಿವೃದ್ಧಿಗೆ ಅತ್ಯುತ್ತಮ ವಾತಾವರಣ ಇತ್ತು. ನಿಸರ್ಗ ನೀಡಿದ ಈ ಕೊಡುಗೆ ಪಕ್ಷಿಗಳ ಪಾಲಿಗೆ ವರದಾನವಾಗಿತ್ತು. ಜೂನ್ 13 ಕ್ಕೆ ಕೆರೆಗೆ ಇಳಿದ ಬೆಳ್ಳಕ್ಕಿಗಳು ಮಳೆಯಲ್ಲಿಯೇ ಗೂಡುಕಟ್ಟಿ ಮೊಟ್ಟೆ ಇಟ್ಟು ಕಾವುಕೊಟ್ಟು ಮರಿಗಳ ಲಾಲನೆ- ಪೋಷಣೆ ಮಾಡಿಕೊಂಡು ಅಕ್ಟೋಬರ 22 ರ ವೇಳೆಗೆ ಮರಿಗಳೊಂದಿಗೆ ಸಂತೋಷದಿಂದ ಮುಂಡಿಗೆಕೆರೆ ಬಿಟ್ಟು ಹಾರಿ ಹೋಗಿದೆ. ಈ ವರ್ಷ ಅಂದಾಜು 1650 ಕ್ಕೂ ಅಧಿಕ ಬೆಳ್ಳಕ್ಕಿಗಳು ಇದ್ದದ್ದು ಕಂಡು ಬಂದಿದೆ.

    Share This
    300x250 AD
    300x250 AD
    300x250 AD
    Back to top