ಶಿರಸಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ರವರಿಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡುವ ಮೂಲಕ ಬಹುಮತದಿಂದ ಗೆಲ್ಲಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ಭಾಗದಲ್ಲಿ ಬನವಾಸಿ ಪ್ರಾಧಿಕಾರದಿಂದ ಹಿಡಿದು ವರದಾ ನದಿಯಿಂದ ಕೆರೆ ಗಳಿಗೆ ನೀರು ತುಂಬಿಸುವ ಬ್ರಹತ್ ಯೋಜನೆ, ಶಿರಸಿ ಬನವಾಸಿ ರಸ್ತೆ ಅಭಿವೃದ್ಧಿ,ಮಳಗಿ ಬನವಾಸಿ ರಸ್ತೆ ಅಭಿವೃದ್ಧಿ ಮಾಡಿರುವುದು ಧೈರ್ಯದಿಂದ ಮತ ಕೇಳುವ ನೈತಿಕ ಹಕ್ಕು ನಮಗಿದೆ, ನಮ್ಮ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ರವರ ಗೆಲುವು ಶತಸಿದ್ಧ ಎಂದು ಸಾಮಾಜಿಕ ಜಾಲ ತಾಣ ಬನವಾಸಿ ಬ್ಲಾಕ್ ಅಧ್ಯಕ್ಷ ಅಜ್ಜಪ್ಪ ಅಂಡಗಿ ಹೇಳಿದರು.
ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಯ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ರವರ ಪರವಾಗಿ, ಮಾಜಿ ಸಚಿವರು ಹಾಲಿ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ರವರು ಬನವಾಸಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 10 ಪಂಚಾಯತ್ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರುಗಳ ಹಾಗೂ ಕಾರ್ಯಕರ್ತರ, ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಭೀಮಣ್ಣ ನಾಯ್ಕ ಹಾಗೂ ಕೆಪಿಸಿಸಿ ಸದಸ್ಯರು ಪ್ರಶಾಂತ ದೇಶಪಾಂಡೆ, ನಿವೇದಿತಾ ಆಳ್ವಾ, ಸಿ.ಎಫ್.ನಾಯ್ಕ, ಬಸವರಾಜ ದೊಡ್ಮನಿ, ನಾಗರಾಜ ನಾರ್ವೇಕರ್, ಅಬ್ದುಲ್ ಮಜೀದ್, ಬನವಾಸಿ ಬ್ಲಾಕ್ ಕಾಂಗ್ರೆಸ್ ಎಲ್ಲ ಸ್ಥರದ ಶೆಲ್ ಅಧ್ಯಕ್ಷರುಗಳು, ಘಟಕಾಧ್ಯಕ್ಷರುಗಳು, ಬೂತ್ ಅಧ್ಯಕ್ಷರುಗಳು, ಹಾಗೂ ವಿವಿಧ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು, ಸದಸ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.