• first
  second
  third
  previous arrow
  next arrow
 • ಬೀಚ್ ನಲ್ಲಿ ಅಕ್ರಮ ಚಟುವಟಿಕೆ- ಐವರು ವಶಕ್ಕೆ

  300x250 AD

  ಕುಮಟಾ: ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದಲ್ಲಿ ಗಾಂಜಾ ಸೇವನೆ ವಿಷಯಕ್ಕೆ ಸಂಬoಧಿಸಿದoತೆ ಕರಾವಳಿ ಕಾವಲು ಪಡೆಯ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗೋಕರ್ಣದ ಕುಡ್ಲೆ ಬೀಚ್ ಸನ್ ಆ್ಯಂಡ್ ಮೂನ್ ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದೆ. ಬಂಧಿತರಲ್ಲಿ ನೇಪಾಳದ ಲಕ್ಷ್ಮಣ , ಸುಮಂತ್, ಭರತ್, ತಮನ್, ಆಯುಷ್, ಲಾಮಾ, ಹಿರಾಲಾಲಾ, ವಿಪಿಎನ್ ಕೆಸಿ, ತೇಜ್ ಚಂದ್ರ ಬಂಧಿತರಾಗಿದ್ದಾರೆ. ರಾಜಮನ್, ಬಹುದ್ದೂರ್, ತಮನ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಕರಾವಳಿ ಕಾವಲು ಪಡೆಯ ಸಿಪಿಐ ಮಾರುತಿ ನಾಯ್ಕ ಮತ್ತು ಪಿಎಸ್‌ಐ ದಯಾನಂದ ಅವರ ನೇತೃತ್ವ ತಂಡ ಈ ದಾಳಿ ನಡೆಸಿದೆ. ರೆಸಾರ್ಟ್ ವ್ಯವಸ್ಥಾಪಕ ಮತ್ತು ಕೆಲಸಗಾರರಿಂದ ಗಾಂಜಾ ಮದ್ಯದ ಬೀಯರ್ ಮತ್ತು ಹುಕ್ಕಾಗಳನ್ನು ವಶಪಡಿಸಕೊಂಡು ಐವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಓರ್ವರು ಪರಾರಿಯಾಗಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top