• Slide
    Slide
    Slide
    previous arrow
    next arrow
  • ಅಕ್ರಮ ಗೋವಾ ಮದ್ಯ ಸಾಗಾಟ; 4ಲಕ್ಷ ಮೌಲ್ಯದ ಸಾಮಗ್ರಿ ಜೊತೆ ಆರೋಪಿ ಬಂಧನ

    300x250 AD

    ಅಂಕೋಲಾ/ಕಾರವಾರ: ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ತಾಲೂಕಿನ ಮಾಜಾಳಿ ನಡೆದಿದೆ.

    ಅಂಕೋಲಾ ತಾಲೂಕಿನ ಅವರ್ಸಾದ ಸಂತೋಷ ಅಶೋಕ ಠಾಕ್ಕರಕರ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಸುಮಾರು 4,31,200 ರು. ಮೌಲ್ಯದ 750 ಎಮ್.ಎಲ್.ನ ರಾಯಲ್ ಸ್ಟಾಗ್ ವಿಸ್ಕಿಯ 12 ಬಾಟಲಿಗಳು 9 ಲೀ, 750 ಎಮ್.ಎಲ್.ನ ಒಟ್ಟು 9 ಗ್ರೀನ್‍ಲ್ಯಾಂಡ್ ಕೊಕೊನೆಟ್ ಫೆನ್ನಿ ಲೇಬರ್ ಇರುವ ಪ್ಲಾಸ್ಟಿಕ್ ಬಾಟಲಿಗಳು ತಲಾ 36ರಂತೆ ಒಟ್ಟು 21 ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 756 ಬಾಟಲಿ (ಒಟ್ಟು 567 ಲೀ), 24 ಖಾಲಿ ಮೀನಿನ ಕೆಟ್ ಹಾಗೂ ಮದ್ಯಸಾಗಾಟಕ್ಕೆ ಬಳಸಿದ ಫಿಶ್ ಕಂಟೇನರ್‍ನ್ನು ವಶಪಡಿಸಿಕೊಳ್ಳಲಾಗಿದೆ.

    300x250 AD


    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಉತ್ತರಕನ್ನಡ ಜಿಲ್ಲೆ ಕಾರವಾರ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಗಂಗಾಧರ ಯು, ಅಂತರಗಟ್ಟಿ ಅಬಕಾರಿ ಉಪನಿರೀಕ್ಷಕರು ಮಾಜಾಳಿ ತನಿಖಾ ಠಾಣೆರವರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಬ್ಬಂದಿಗಳಾದ ಗಣೇಶ ಆನಂದು ನಾಯ್ಕ, ಎಸ್.ಎಸ್. ನಾಗೇಕರ, ಕೆ.ಆರ್.ಪಾವಸರ ಹಾಗೂ ಚುನಾವಣಾ ನಿಮಿತ್ತ ತಂಡದ ಅಧಿಕಾರಿ ಸರ್ವೆಶ ನಾಯ್ಕ ಕಾರವಾರ ಕಾರ್ಯಾಚರಣೆಯಲ್ಲಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top