ಶಿರಸಿ: ನೇತ್ರ ತಜ್ಞ ಡಾ.ಶಿವರಾಮ್ ಕೆ.ವಿ ಅವರು ‘ಅತ್ಯುತ್ತಮ ಸಮುದಾಯ ಸೇವಾ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ.
“ಕರ್ನಾಟಕ ನೇತ್ರ ತಜ್ಞರ ಸಂಘಟನೆ” ಪ್ರತಿ ವರ್ಷ ಒಬ್ಬರಿಗೆ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಡಿ. 12ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ನೇತ್ರ ತಜ್ಞರ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಂದು ಭಾರತೀಯ ವೈದ್ಯಕೀಯ ಸಂಘ ಶಿರಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.