ಶಿರಸಿ: ಉ.ಕ ಜಿಲ್ಲೆಯ ಮಹಿಳೆಯರು, ಯುವಕರು, ವಿಶೇಷವಾಗಿ ಬಡವರು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಬಿಜೆಪಿ ಸರಕಾರ ವಿಫಲವಾಗಿದೆ. ಇದಕ್ಕೆ ಪರಿಹಾರ ಕಾಣಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಬರುವ ಎಂ.ಎಲ್.ಸಿ ಚುನಾವಣೆಯಲ್ಲಿ ಕಾಂಗ್ರೆಸ ಜಯಗಳಿಸಿದರೆ ಅಭಿವೃದ್ದಿಗೂ ಹೊಸ ದಿಕ್ಕು ಬರಲಿದೆಯೆಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಪ್ರಧಾನಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ ಕಾನೂನು ವಿಭಾಗದ ಕಾರ್ಯದರ್ಶಿ ಜ್ಯೋತಿ ಮುಕ್ತೇಶಗೌಡ ಪಾಟೀಲ ಹೇಳಿಕೆ ನೀಡಿದ್ದಾರೆ.
ರಾಜ್ಯ, ದೇಶದಲ್ಲಿ ಬಿಜೆಪಿ ಜನವಿರೋಧಿ, ಮಹಿಳಾ ವಿರೋಧಿ, ರೈತ ವಿರೋಧಿ ನೀತಿಯಿಂದ ಜನರು ಬೇಸತ್ತು ಬದಲಾವಣೆ ಬಯಸಿದ್ದಾರೆ. ಹಾನಗಲ ಉಪಚುನಾವಣೆಯಲ್ಲಿ ಕಾಂಗ್ರೆಸ ಸರಕಾರ ಬೇಕೆಂಬ ಸೂಚನೆ ನೀಡಿದ್ದು, ಇದೀಗ ಎಂಎಲ್‍ಸಿ ಚುನಾವಣೆಯಲ್ಲೂ ಕಾಂಗ್ರೆಸ್’ಗೆ ಶಕ್ತಿ ನೀಡುವದು ನಿಶ್ಚಿತವಾಗಿದೆ. ಇದರಿಂದ ಮತ್ತೆ 2023ರಲ್ಲಿ ಕಾಂಗ್ರೆಸ ಸರಕಾರ ಬರುವದು ಖಚಿತವಾಗಲಿದೆ. ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರ ಸಂಕಷ್ಟ ಹೆಚ್ಚಿದೆ. ಸಿಲೆಂಡರ ದರ ಹೆಚ್ಚಳದಿಂದ ಬಡ, ಮಧ್ಯಮ ವರ್ಗದವರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಮತಗಳ ಮೂಲಕ ಬಿಜೆಪಿಗೆ ಉತ್ತರ ನೀಡಲು ಸಿದ್ದರಾಗಿದ್ದಾರೆ.
ಇನ್ನೂ ಉತ್ತರಕನ್ನಡದಲ್ಲಿ ಕೋವಿಡ ಸಂದರ್ಭದಲ್ಲಿ ಬಿಜೆಪಿ ಸರಕಾರ ವಿಶೇಷ ಸ್ಪಂದನೆ ತೋರದೇ ಇದ್ದಾಗ. ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕರ ನೇತೃತ್ವದ ತಂಡವು ಹಿರಿಯ ನಾಯಕ ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಆರೋಗ್ಯ ಸೇವೆ ಮೂಲಕ ಸಹಸ್ರಾರು ಬಡವರಿಗೆ ಸಹಾಯ ಮಾಡಿದ್ದಾರೆ. ದೇಶಪಾಂಡೆ ಅವರು ಹಾಗೂ ಪುತ್ರ ಪ್ರಶಾಂತ ಅವರು ಪ್ರತಿ ತಾಲೂಕಿಗೆ ಅಕ್ಸಿಜನ ಯಂತ್ರ, ಇತರ ಔಷಧಿಗಳು ಸಹಿತ ಲಕ್ಷಾಂತರ ರೂಮೌಲ್ಯದ ಆರೋಗ್ಯ ಸಾಮಗ್ರಿ ನೀಡಿದ್ದಾರೆ. ಜನರು ಇವೆಲ್ಲ ನೆನಪಿಸಿಕೊಂಡು ಅಭ್ಯರ್ಥಿ ಭೀಮಣ್ಣ ನಾಯ್ಕರಿಗೆ ಪಕ್ಷಾತೀತವಾಗಿ ಬೆಂಬಲ ನೀಡಿ ಜಯ ನೀಡಲಿದ್ದಾರೆಂದು ಜ್ಯೋತಿ ಪಾಟೀಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.