ಶಿರಸಿ: ತಾಲೂಕಿನ ದಾಸನಕೊಪ್ಪ ಕ್ಲಸ್ಟರಿನ ಸ.ಕಿ.ಪ್ರಾಥಮಿಕ ಶಾಲೆ ರಂಗಾಪುರದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸೈಬರ್ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಸಿ.ಆರ್.ಪಿ ಮಹೇಂದ್ರ ಬಿದರಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದು ಅಪರಾಧವಲ್ಲ. ಆದರೆ ಒಮ್ಮೆ ಪೋನ್ ನೀಡಿದರೆ ಅವರತ್ತ ಗಮನ ಹರಿಸದೇ ಇರುವುದು ಅಪರಾಧ ಎಂದರು.
ಬನವಾಸಿ ಪೊಲೀಸ್ ಠಾಣೆ ಎ ಎಸ್.ಐ. ನಾಗೇಂದ್ರ ನಾಯ್ಕ ಮಾತನಾಡಿ ಸೈಬರ್ ಕ್ರೈಮ್, ಹಾಗೂ ಹಲವು ವಿಧದ ಅಪಾಯಗಳ ಕುರಿತು ಸೂಕ್ಷ್ಮ ವಾಗಿ ಮಕ್ಕಳಿಗೆ ತಿಳಿ ಹೇಳಿ ಮಕ್ಕಳನ್ನು ಜಾಗೃತಿಯಿಂದ ಬೆಳೆಸಿ ಎಂದು ಪಾಲಕರು, ಪೊಷಕರಿಗೆ ಮತ್ತು ಶಾಲಾ ಶಿಕ್ಷಕರಿಗೆ ಕರೆ ನೀಡಿದರು.
ಈ ವೇಳೆ ಬನವಾಸಿ ಪೊಲೀಸ್ ಠಾಣೆ ಸಿಬ್ಬಂದಿ ಶಿವರಾಜ ಎಸ್, ಮಂಜುನಾಥ ಬಿ. ಗ್ರಾಮಸ್ತರಾದ ಮೂಕಪ್ಪ ಮಡಿವಾಳ, ಲಕ್ಕಪ್ಪ, ಮಾಲತೇಶ ವಾಲ್ಮೀಕಿ, ಮುಖ್ಯ ಶಿಕ್ಷಕ ದೇವಿದಾಸ ನಾಯಕ, ಶಿಕ್ಷಕಿಯರಾದ ಸುನೀತಾ, ಪ್ರಭಾವತಿ ಇದ್ದರು.