ಯಲ್ಲಾಪುರ: ಪಟ್ಟಣದ ಪ್ರಮುಖ ಆಯಕಟ್ಟಿನ ಜಾಗದಲ್ಲಿ ಪ.ಪಂ ಸಿಸಿಟಿವಿ ಅಳವಡಿಸಬೇಕು ಎಂದು ವಿವಿಧ ಸಾಮಾಜಿಕ ಸಂಘಟನೆಗಳ ಪ್ರಮುಖರು ಗುರುವಾರ ಪ.ಪಂ ಮುಖ್ಯಾಧಿಕಾರಿ ಹಾಗೂ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಬಹುತೇಕ ಕಡೆಗಳಲ್ಲಿ ಸಿಸಿ ಕ್ಯಾಮರಾ ಇದ್ದರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾರಣ ಗುಣಮಟ್ಟದ ಕ್ಯಾಮರಾ ಅಳವಡಿಸಬೇಕು. ಹಾಗೇ ಪಟ್ಟಣದ ನೂತನ ಬಸ್ ನಿಲ್ದಾಣದಲ್ಲಿ ಕಿಸೆಕಳ್ಳರ ಹಾವಳಿ ಹೆಚ್ಚಿದೆ. ಇತ್ತೀಚೆಗೆ ಒಬ್ಬರ ಬ್ಯಾಗ, ಹಣ ಕಳುವಾಗಿದೆ. ಇಂತಹ ಅನಪೇಕ್ಷಿತ ಚಟುವಟಿಕೆಗಳ ನಿಯಂತ್ರಣದ ಸಲುವಾಗಿ, ಬಸ್ ನಿಲ್ದಾಣ ಹಾಗೂ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ವಿಲ್ಸನ್ ಫರ್ನಾಂಡೀಸ್, ಚನ್ನಪ್ಪ ಹರಿಜನ, ಶಿವಾನಂದ ಖಾನಾಪುರ, ಕೆ.ಎಫ್.ಕಂಬಳೆನ್ನವರ್, ಸಮೀರ ಖುರೇಶಿ, ಹಜರತ್ ಅಲಿ ಕುರೇಶಿ, ಹನುಮಂತ ಬೊವಿವಡ್ಡರ್, ಪರಶುರಾಮ ಹರಿಜನ, ಈರಣ್ಣ ಕಲ್ಮಠ, ರಿಯಾಜ್, ಹನೀಪ್, ರಜಾಕ್ ಮುಂತಾದವರು ಇದ್ದರು.