ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಹಾನಿ ಆಗಿದೆ. ಭತ್ತದ ಬೆಳೆ ಹಾಗೂ ಅಡಿಕೆ ಬೆಳೆ ಕಟಾವ್‍ಗೆ ಬಂದಿದ್ದು ಮಳೆಯಿಂದ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ರೈತನ ಬದುಕೆ ಕಷ್ಟದಲ್ಲಿರುವಾಗ ಅಕಾಲಿಕ ಮಳೆ ಕೊಡಲಿ ಏಟು ನೀಡಿದಂತಾಗಿದೆ. ಕಾರಣ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಪರಿಹಾರ ರೈತನ ಖಾತೆಗೆ ಜಮಾ ಮಾಡಿ ಸಹಾಯಕ್ಕೆ ಬರುವಂತೆ ಕಂದಾಯ ಮಂತ್ರಿ ಆರ್. ಅಶೋಕ, ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಎನ್. ಹೆಗಡೆ, ಮುರೇಗಾರ ಮನವಿ ಮಾಡಿದ್ದಾರೆ.
ಇದೂ ಅಲ್ಲದೆ ಸಹಾಯಕ ಕಮೀಷನರ್‍ರವರ ಸಾಪ್ಟವೇರ್ ತಾಂತ್ರಿಕ ತೊಂದರೆ ಆಗಿ ರೈತರು ಕಂದಾಯ ಇಲಾಖೆ ಕಛೇರಿಗೆ ಅಲೇದಾಡುವಂತಾಗಿದ್ದು ಕೂಡಲೇ ಸದ್ರಿ ಸಾಪ್ಟವೇರ್ ದುರಸ್ತಿಗೊಳಿಸಿ ರೈತರಿಗೆ ಆರು ತಿಂಗಳಿಂದ ತೊಂದರೆ ಆಗಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು.
ಶಾಶ್ವತ ಬೆಳೆ ವಿವರ ದಾಖ್ಲೆ ಮಾಡುವುದು ಕೆಲ ಜಿಲ್ಲೆಗಳಿಗೆ ವಿನಾಯತಿ ನೀಡಿದ್ದು, ಉತ್ತರ ಕನ್ನಡದಲ್ಲೂ ಸಹ ಅಡಿಕೆ ಬೆಳೆ ಶಾಶ್ವತ ಬೆಳೆಯಾಗಿದ್ದು ಕಾರಣ ಈ ಬೆಳೆಗೆ ವಿನಾಯತಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಆದೇಶ ಮಾಡಿ ಈ ಮೇಲಿನ ಎಲ್ಲ ರೈತರ ತೊಂದರೆ ನಿವಾರಿಸುವಂತೆ ವಿನಂತಿಸಿದ್ದಾರೆ.